ಮಾಜಿ ಸಿಎಂ ಸಿದ್ದರಾಮಯ್ಯಗೆ ಹನಿಟ್ರ್ಯಾಪ್ ವಿಡಿಯೋ ಭೀತಿ: 42 ಮಾಧ್ಯಮಗಳ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ

Edited By:

Updated on: Oct 13, 2026 | 7:50 PM

ಹನಿಟ್ರ್ಯಾಪ್ ವಿಡಿಯೋ ಭೀತಿ ಹಿನ್ನೆಲೆಯಲ್ಲಿ 42 ಮಾಧ್ಯಮ ಸಂಸ್ಥೆಗಳ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈಗಾಗಲೇ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​​ಲೋಡ್​​ ಆಗಿರುವ ಹಿನ್ಮೆಲೆ, ಅದನ್ನು ತೆರವುಗೊಳಿಸುವಂತೆಯೂ ಕೋರ್ಟ್ ಸೂಚಿಸಿದೆ.

ಬೆಂಗಳೂರು, ಅಕ್ಟೋಬರ್​​ 13: ಹನಿಟ್ರ್ಯಾಪ್ ವಿಡಿಯೋ ಭೀತಿ ಹಿನ್ನಲೆ 42 ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ 18ನೇ ಸಿಸಿಹೆಚ್ ಕೋರ್ಟ್ ಮಧ್ಯಂತರ ನಿರ್ಬಂಧಕಾಜ್ಞೆ ನೀಡಿದೆ. ಈಗಾಗಲೇ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​​ಲೋಡ್​​ ಆಗಿರುವ ಹಿನ್ಮೆಲೆ, ಅದನ್ನು ತೆರವುಗೊಳಿಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.  ಕೋರ್ಟ್​ಗೆ ಯೂಟ್ಯೂಬ್ ವಿಡಿಯೋ ಇದ್ದ ಪೆನ್​ಡ್ರೈವ್ ಸಲ್ಲಿಕೆ ಮಾಡಲಾಗಿದ್ದು, ಸಿದ್ದರಾಮಯ್ಯ ಪರ ವಕೀಲ ಶತಭಿಷ ಶಿವಣ್ಣ ಮತ್ತು ವಿಕ್ರಮ್ ಹುಯಿಲಗೋಳ್ ವಾದ ಮಂಡಿಸಿದ್ದರು. ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿ ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದಾರೆ. ಆದರೆ ವಿಡಿಯೋ ಮೂಲಕ ಅವರ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ. ಇಬ್ಬರು ಪುರುಷರು ಓರ್ವ ಮಹಿಳೆಯ ಸಂಭಾಷಣೆ ಸ್ಟಿಂಗ್ ಮಾಡಲಾಗಿದೆ. 2011ರ ಘಟನೆ ಬಗ್ಗೆ ವಿಡಿಯೋದಲ್ಲಿ ಪದೇ ಪದೇ ಪ್ರಶ್ನೆ ಕೇಳಿದ್ದಾರೆ. ಆರೋಪಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ ಪ್ರಸಾರ ಮಾಡಲಾಗಿದೆ.15 ವರ್ಷಗಳ ಹಿಂದಿನ ಘಟನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದಕ್ಕೆ ಅತಿ ದೊಡ್ಡ ಸಿಡಿ ಬ್ಲಾಸ್ಟ್ ಎಂದು ಹೆಡ್‌ಲೈನ್ ನೀಡಲಾಗಿದ್ದು, ಅ.1ರ ವರೆಗೆ 3.24 ಲಕ್ಷ ಜನ ಇದರ ವೀಕ್ಷಣೆ ಮಾಡಿದ್ದಾರೆ. ಆದರೆ ವಿಡಿಯೋ ನೈಜತೆ, ಉದ್ದೇಶ, ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಇದು ಮುಂದುವರಿದರೆ ಸಿದ್ದರಾಮಯ್ಯ ಚಾರಿತ್ರ್ಯಹರಣವಾಗಲಿದೆ ಎಂದು ವಾದಿಸಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Oct 13, 2026 06:53 PM
Loading...
Unable to load recommendations.
Follow Us
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More