ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು, ಅಪಾರ ನೀರು ಪೋಲು
ಹೊನ್ನಾಳಿ ತಾಲೂಕಿನ ಕೂಳಘಟ್ಟ ಗ್ರಾಮದಲ್ಲಿ ಸಾಸ್ವಿಹಳ್ಳಿ ಏತನೀರಾವರಿ ಪೈಪ್ ಒಡೆದು ನೀರು ರಭಸವಾಗಿ ಚಿಮ್ಮಿದ್ದರಿಂದ ವಾಹನಗಳಿಗೆ ಹಾನಿಯಾಗಿದೆ. ಕಳಪೆ ಕಾಮಗಾರಿ ಆರೋಪ ಕೇಳಿಬಂದಿದ್ದು, ಜನ ಪ್ರತಿನಿಧಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ನೀರು ರಭಸವಾಗಿ ಚಿಮ್ಮಿದ ವಿಡಿಯೋ ಇಲ್ಲಿದೆ ನೋಡಿ.
ದಾವಣಗೆರೆ, ಜುಲೈ 26: ಸಾಸ್ವಿಹಳ್ಳಿ ಏತನೀರಾವರಿ ಪೈಪ್ ಒಡೆದು ಆಕಾಶದತ್ತೆರಕ್ಕೆ ನೀರು ಚಿಮ್ಮಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೂಳಘಟ್ಟ ಗ್ರಾಮದಲ್ಲಿ ನಡೆದಿದೆ. ಬೆಳಗ್ಗೆ ಐದು ಗಂಟೆಯಿಂದ ಮೂರು ಕಡೆ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ನೀರು ರಭಸವಾಗಿ ಚಿಮ್ಮಿದ್ದರಿಂದ ಮನೆ ಹಾಗೂ ಅಕ್ಕ ಪಕ್ಕ ನಿಲ್ಲಿಸಿದ ವಾಹನಗಳಿಗೆ ಹಾನಿಯಾಗಿದೆ. ತುಂಗಭದ್ರಾ ನದಿಯಿಂದ ಚನ್ನಗಿರಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದಕ್ಕೆಂದು ಹಮ್ಮಿಕೊಂಡಿರುವ ಯೋಜನೆಯಾಗಿದೆ ಸಾಸ್ವಿಹಳ್ಳಿ ಏತನೀರಾವರಿ ಯೋಜನೆ. ಕಳಪೆ ಕಾಮಗಾರಿ ಕಾಮಗಾರಿ ಕಾರಣಕ್ಕೆ ಮೇಲಿಂದ ಮೇಲೆ ಒಡೆದು ಪೈಪ್ಗಳು ಹೋಗುತ್ತಿವೆ ಎಂಬ ಆರೋಪ ಕೇಳಿಬಂದಿದ್ದು, ಗುತ್ತಿಗೆದಾರ ಹಾಗೂ ಜನ ಪ್ರತಿನಿಧಿಗಳಿಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.