ಆಷಾಢ ಹಬ್ಬದ ಮದ್ದು ನೀರಿನ ಹಲ್ವಾ; ಔಷಧೀಯ ಗುಣಗಳುಳ್ಳ ಸೊಪ್ಪಿನಿಂದ ತಯಾರಿಸಲಾಗುತ್ತದೆ
18 ದಿನಗಳ ಕಾಲ ದಿನಕ್ಕೊಂದು ಔಷಧ ಗುಣ ಸೇರಿ 18ನೇ ದಿನ ಪರಿಮಳ ಬೀರುತ್ತದೆ. ಹೀಗಾಗಿ ಅಂದು ಆ ಗಿಡವನ್ನು ಬೇಯಿಸಿ ರಸ ತೆಗೆದರೆ ದೇಹದಲ್ಲಿನ ನಾನಾ ಕಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆ ಹಿರಿಯರಲ್ಲಿ ಇದೆ.
ಕಕ್ಕಡ ಎಂದರೇ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ಮೂರಡಿಯಷ್ಟು ಎತ್ತರ ಬೆಳೆಯುವ ಈ ಗಿಡಕ್ಕೆ ಆಟಿ ತಿಂಗಳ ಮೊದಲ ದಿನದಿಂದ ನಾನಾ ಔಷಧೀಯ ಗುಣಗಳು ಸೇರುತ್ತವೆ. 18 ದಿನಗಳ ಕಾಲ ದಿನಕ್ಕೊಂದು ಔಷಧ ಗುಣ ಸೇರಿ 18ನೇ ದಿನ ಪರಿಮಳ ಬೀರುತ್ತದೆ. ಹೀಗಾಗಿ ಅಂದು ಆ ಗಿಡವನ್ನು ಬೇಯಿಸಿ ರಸ ತೆಗೆದರೆ ದೇಹದಲ್ಲಿನ ನಾನಾ ಕಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆ ಹಿರಿಯರಲ್ಲಿ ಇದೆ. ಅದು ಇಂದಿಗೂ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಕೆಂಬಣ್ಣದ ಈ ರಸದಲ್ಲಿ ಹಲ್ವಾ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ. ಇಂದು ನಾವು ಆಷಾಢ ಹಬ್ಬದ ಮದ್ದು ನೀರಿನ ಹಲ್ವಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಆಷಾಢ ಹಬ್ಬದ ಮದ್ದು ನೀರಿನ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು ಆಟಿ ಸೊಪ್ಪು, ಬೆಲ್ಲ, ಚಿರೋಟಿ ರವೆ, ಸಕ್ಕರೆ, ಏಲಕ್ಕಿ, ಉಪ್ಪು, ತುಪ್ಪ
ಆಷಾಢ ಹಬ್ಬದ ಮದ್ದು ನೀರಿನ ಹಲ್ವಾ ಮಾಡುವ ವಿಧಾನ
ಮೊದಲು ಚಿರೋಟಿ ರವೆ ಫ್ರೈ ಮಾಡಿಕೊಳ್ಳಿ, ಬಳಿಕ ಅದಕ್ಕೆ ತುಪ್ಪು ಹಾಕಿ ಒಂದು ಪ್ಲೇಟ್ನಲ್ಲಿ ತೆಗೆದಿಟ್ಟುಕೊಳ್ಳಿ, ಬಳಿಕ ಒಂದು ಬಣಾಲೆಗೆ ಆಟಿ ಸೊಪ್ಪು ಬೇಯಿಸಿದ ನೀರು, ಬೆಲ್ಲ ಹಾಕಿ ಕುದಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ, ಸಕ್ಕರೆ, ಉಪ್ಪು, ಹುರಿದ ರವೆ ಹಾಕಿ ಚೆನ್ನಾಗಿ ಕಲಸಿ, ತುಪ್ಪ ಹಾಕಿದರೆ, ಆಷಾಢ ಹಬ್ಬದ ಮದ್ದು ನೀರಿನ ಹಲ್ವಾ ಸವಿಯಲು ಸಿದ್ಧ.
ಇದನ್ನೂ ಓದಿ:
ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ; ಆಟಿ ಸೊಪ್ಪಿನಿಂದ ತಯಾರಿಸಿದ ವಿಶೇಷ ಅಡುಗೆ