ಕರಾವಳಿ ಸ್ಪೆಷಲ್ ಪತ್ರೊಡೆ; ಹೊಸ ತರಹದ ಅಡುಗೆಯನ್ನೊಮ್ಮೆ ಮಾಡಿ ಸವಿಯಿರಿ
ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಕರಾವಳಿ ಸ್ಪೇಷಲ್ ಪತ್ರೊಡೆ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.
ಬೆಳಿಗ್ಗೆಯ ಉಪಹಾರಕ್ಕೆ, ಮಧ್ಯಾಹ್ನದ ತಿಂಡಿಗೆ, ರಾತ್ರಿ ಊಟಕ್ಕೆ ಯಾವ ಅಡುಗೆ ಮಾಡುವುದು ಎನ್ನುವುದು ಸಾಮಾನ್ಯವಾಗಿ ಮಹಿಳೆಯರಿಗೆ ಒಂದು ಸವಾಲಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಕರಾವಳಿ ಸ್ಪೇಷಲ್ ಪತ್ರೊಡೆ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.
ಕರಾವಳಿಯ ಸ್ಪೆಷಲ್ ಪತ್ರೊಡೆ ಮಾಡಲು ಬೇಕಾಗುವ ಸಾಮಾಗ್ರಿಗಳು ಅಕ್ಕಿ, ಬೆಲ್ಲ, ಇಂಗು, ಹುಳಿ, ಉಪ್ಪು, ಅರಿಶಿಣ ಪುಡಿ, ಮೆಂತೆ, ಜೀರಿಗೆ, ಕೊತ್ತಂಬರಿ ಕಾಳು, ಒಣ ಮೆಣಸು, ಕೊಬ್ಬರಿ ತುರಿ, ಕಡಲೆ ಬೆಳೆ, ಪತ್ರೊಡೆ ಎಲೆ.
ಕರಾವಳಿಯ ಸ್ಪೆಷಲ್ ಪತ್ರೊಡೆ ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರಿಗೆ, ನೆನಸಿದ ಅಕ್ಕಿ, ಮೆಂತೆ, ಉಪ್ಪು, ಜೀರಿಗೆ, ನೆನೆಸಿದ ಕಡಲೆ ಬೇಳೆ, ಇಂಗು, ಹುಳಿ, ಅರಿಶಿಣ ಪುಡಿ, ಕೊತ್ತಂಬರಿ ಕಾಳು, ಒಣ ಮೆಣಸು, ಕೊಬ್ಬರಿ ತುರಿ ಹಾಕಿ ರುಬ್ಬಿಕೊಳ್ಳಿ. ನಂತರ ಪತ್ರೊಡೆ ಎಲೆಗೆ ರುಬ್ಬಿದ ಮಿಶ್ರಣವನ್ನು ಹಾಕಿ, ನಂತೆ ಅದರ ಮೇಲೆ ಮತ್ತೊಂದು ಎಲೆ ಹಾಕಿ ರುಬ್ಬಿದ ಮಿಶ್ರಣ ಹಾಕಿ ಹೀಗೆ 4 ರಿಂದ 5 ಎಲೆಗಳನ್ನು ಇಟ್ಟು ಮಡಚಿಕೊಳ್ಳಿ. ನಂತರ ಒಂದು ಪಾತ್ರೆ ಇಟ್ಟು ನೀಡು ಹಾಕಿ, 20ನಿಮಿಷ ಬೇಯಿಸಿಕೊಳ್ಳಿ. ಬೇಯಿಸಿದನ್ನು ತೆಗೆದು ಚಿಕ್ಕ ತುಂಡುಗಳನ್ನಾಗಿ ಮಾಡಿಕೊಳ್ಳಿ, ನಂತರ ತವಾದ ಮೇಲೆ ಸ್ವಲ್ಪ ತುಪ್ಪ ಹಾಕಿ ಫ್ರೈ ಮಾಡಿಕೊಳ್ಳಿ.
ಇದನ್ನೂ ಓದಿ:
ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಕುಂದಾಪುರದ ಅಕ್ಕಿ ಹಪ್ಪಳ ತಯಾರಿಸುವುದು ಹೇಗೆ ಗೊತ್ತಾ? ವಿಶಿಷ್ಟವಾದ ಫೇಮಸ್ ರೆಸಿಪಿ ಮಾಡಿ ಸವಿಯಿರಿ