ಸಿದ್ದರಾಮಯ್ಯ ಮೇಲೆ ಮೊದಲಿನಷ್ಟೇ ಪ್ರೀತಿ-ಗೌರವ ಇದೆ, ಕಾಂಗ್ರೆಸ್ ಸೇರುವ ಇರಾದೆ ಇಲ್ಲ,: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ
ರಾಜಕೀಯ ಬದುಕಿನಲ್ಲಿ ತಾನು ಅಪಾರ ಜನಮನ್ನಣೆ ಗಳಿಸಿದ್ದು ಈಗಲೂ ಯಾವುದಾದರೂ ಸರ್ಕಲ್ ನಲ್ಲಿ ಹೋಗಿ ನಿಂತರೆ 5,000 ಜನ ಸೇರುತ್ತಾರೆ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಬೆಂಗಳೂರು: ಬಹಳ ದಿನಗಳ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗುವ ಉದ್ದೇಶವೇನಾದರೂ ಇದೆಯಾ ಅಂತ ಕೇಳಿದ ಪ್ರಶ್ನೆಗೆ ಅವರು, ಅಲ್ಲಿರುವ ಜನಗಳಿಗೆ ಕೆಲಸವಿಲ್ಲ, ತಾನು ಹೋಗಿ ಮಾಡೋದೇನು ಅಂತ ಹೇಳಿದರು. ತತ್ವ ಸಿದ್ಧಾಂತಗಳಿಗೆ ಬದ್ಧನಾಗಿರುವ ರಾಜಕಾರಣಿ ತಾನು ಎಂದು ಹೇಳಿದ ಇಬ್ರಾಹಿಂ, ರಾಜಕೀಯ ಬದುಕಿನಲ್ಲಿ (political career) ಅಪಾರ ಜನಮನ್ನಣೆ ಗಳಿಸಿದ್ದು ಈಗಲೂ ಯಾವುದಾದರೂ ಸರ್ಕಲ್ ನಲ್ಲಿ ಹೋಗಿ ನಿಂತರೆ 5,000 ಜನ ಸೇರುತ್ತಾರೆ ಎಂದರು. ಜನ ತನ್ನನ್ನು ಕೋಮುವಾದಿ (communal) ಮತ್ತು ಭ್ರಷ್ಟನಲ್ಲದ (corrupt) ರಾಜಕಾರಣಿ ಅಂತ ಗುರುತಿಸುತ್ತಾರೆ, ಅಷ್ಟು ಸಾಕು; ಅದಕ್ಕಿಂತ ದೊಡ್ಡ ಗೌರವ ಪುರಸ್ಕಾರ ಮತ್ತೊಂದಿಲ್ಲ ಎಂದು ಇಬ್ರಾಹಿ ಹೇಳಿದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ತಮಗೆ ಯಾವುದೇ ಕೋಪ, ಅಸಮಾಧಾನ ಇಲ್ಲ ಎನ್ನುವ ಅವರ ಹಳೆಯ ದೋಸ್ತಿ ಸಿದ್ದರಾಮಯ್ಯ ಮೇಲೆ ಈಗಲೂ ಪ್ರೀತಿಯಿದೆ, ಭಗವಂತ ಅವರಿಗೆ ಒಳ್ಳೇ ಆರೋಗ್ಯ, ಆಯುಷ್ಯ ದಯಪಾಲಿಸಲಿ ಅಂತ ಹಾರೈಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ