HD Devegowda presser: ಚುನಾವಣೆ ಮುಗಿದು ಎರಡೂವರೆ-ತಿಂಗಳು ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಾರ್ವಜನಿಕವಾಗಿ ಕಾಣಿಸಿಕೊಂಡರು!
ಮಾಧ್ಯಮದವರನ್ನು ಕಂಡು ಬಲವಂತವಾಗಿ ನಗುವ ಪ್ರಯತ್ನ ಇಬ್ರಾಹಿಂ ಮಾಡುತ್ತಿದ್ದಿದ್ದು ಸ್ಪಷ್ಟವಾಗಿ ಗೊತ್ತಾಗುತಿತ್ತು.
ಬೆಂಗಳೂರು: ಇವರನ್ನು ಎಲ್ಲೋ ನೋಡಿದಂತಿದೆಯಲ್ಲ ಅಂತ ನಿಮಗನ್ನಿಸಿದರೆ ಆಶ್ಚರ್ಯವಿಲ್ಲ ಮಾರಾಯ್ರೇ. ರಾಜ್ಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಭಾಷಣಗಳನ್ನು ಮಾಡುವಾಗ ಕಾಂಗ್ರೆಸ್ ನಾಯಕರಾಗಿರುವ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಉಳಿದ ನಾಯಕರು ಹಾಗೂ ಬಿಜೆಪಿ ನಾಯಕರನ್ನು ಶ್ಲೋಕ, ವಚನ ಮತ್ತು ನಾಣ್ಣುಡಿಗಳನ್ನು ಹೇರಳವಾಗಿ ಬಳಸಿ ಒಂದೇ ಸಮನೆ ಟೀಕಿಸುತ್ತಾ, ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ತಾನು ಎಂಬ ರೇಂಜಲ್ಲಿ ಭಾಷಣಗಳನ್ನು ಮಾಡುತ್ತಿದ್ದ ಸಿಎಂ ಇಬ್ರಾಹಿಂ (CM Ibrahim) ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಅಕ್ಷರಶಃ ನಾಪತ್ತೆಯಾಗಿದ್ದರು. ಇವತ್ತು ನಗರದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ ನಡೆಸಿದ ಸುದ್ದಿಗೋಷ್ಟಿಯಲ್ಲಿ ಇಬ್ರಾಹಿಂ ಸುಮಾರು ಎರಡೂವರೆ ತಿಂಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮಾಧ್ಯಮದವರನ್ನು ಕಂಡು ಬಲವಂತವಾಗಿ ನಗುವ ಪ್ರಯತ್ನ ಅವರು ಮಾಡುತ್ತಿದ್ದಿದ್ದು ಸ್ಪಷ್ಟವಾಗಿ ಗೊತ್ತಾಗುತಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ