AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಫ್​ಐ ಸಂಘಟನೆ ಬ್ಯಾನ್​ಗೆ ಸಿಎಂ ಇಬ್ರಾಹಿಂ ತೀವ್ರ ವಿರೋಧ; ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಇಬ್ರಾಹಿಂ

ಕೇಂದ್ರ ಸರ್ಕಾರ ದೇಶದಲ್ಲಿ ಪಿಎಫ್​​ಐ ಸಂಘಟನೆಯನ್ನು 5 ವರ್ಷಗಳವರೆಗೆ ನಿಷೇಧಿಸಿದ್ದ ಕ್ರಮಕ್ಕೆ ಬೆಂಗಳೂರಿನಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಗರಂ ಆಗಿದ್ದಾರೆ.

ಪಿಎಫ್​ಐ ಸಂಘಟನೆ ಬ್ಯಾನ್​ಗೆ ಸಿಎಂ ಇಬ್ರಾಹಿಂ ತೀವ್ರ ವಿರೋಧ; ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಇಬ್ರಾಹಿಂ
ಸಿಎಮ್ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ
TV9 Web
| Edited By: |

Updated on:Sep 28, 2022 | 4:33 PM

Share

ಬೆಂಗಳೂರು: ಕೇಂದ್ರ ಸರ್ಕಾರ ದೇಶದಲ್ಲಿ ಪಿಎಫ್​​ಐ (PFI) ಸಂಘಟನೆಯನ್ನು 5 ವರ್ಷಗಳವರೆಗೆ ನಿಷೇಧಿಸಿದ್ದ ಕ್ರಮಕ್ಕೆ ಬೆಂಗಳೂರಿನಲ್ಲಿ (Bengaluru) ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (CM Ibrahim) ಗರಂ ಆಗಿದ್ದಾರೆ. ಕೇಂದ್ರ ಸರ್ಕಾರ ಪಿಎಫ್​​ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದನ್ನು ನಾನು ಒಪ್ಪುವುದಿಲ್ಲ. ಇಂದಿರಾ ಗಾಂಧಿ ಆರ್​​ಎಸ್​​ಎಸ್​​ ನಿಷೇಧಿಸಿ ತಪ್ಪು ಮಾಡಿದರು. ಅದೇ ತಪ್ಪನ್ನು ಬಿಜೆಪಿ ಈಗ ಮಾಡುತ್ತಿದೆ. ದೇಶ ಸರ್ವನಾಶ ಆಗಬೇಕು ಎಂಬುದು ಬಿಜೆಪಿ ಗುರಿಯಾಗಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಸರ್ಕಾರ ಯಾಕೆ ಆರ್​​ಎಸ್​ಎಸ್​ ಬ್ಯಾನ್ ಮಾಡಲಿಲ್ಲ ? ಆರ್​​ಎಸ್​ಎಸ್​​ ಕೆಟ್ಟದ್ದು ಅಂತಾ ಸೋನಿಯಾ ಗಾಂಧಿ, ಪಿ.ಚಿದಂಬರಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಗೊತ್ತಿರಲಿಲ್ವಾ? ಯಾವ ಸಂಘಟನೆಯನ್ನು ನಿಷೇಧಿಸಿ ಅಂತ ನಾವು ಹೇಳಲ್ಲ. ಆದರೆ ಕೋರ್ಟ್​​​​ನಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶ ಕೊಡಿ. ಸಮರ್ಥನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.

PFI Banned: ಪಿಎಫ್​ಐ ಹಾಗೂ ಅದರ ಅಂಗ ಸಂಸ್ಥೆಗಳ ನಿಷೇಧಕ್ಕೆ 15 ಕಾರಣಗಳು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಎರಡು ಸುತ್ತಿನಲ್ಲಿ ದೇಶ ವ್ಯಾಪಿ ಪಿಎಫ್​ಐ ಮುಖಂಡರ ಮೇಲೆ ದಾಳಿ ಮಾಡಿ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಅಂತಿಮವಾಗಿ ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: 5 ವರ್ಷಗಳ ಅವಧಿಗೆ PFI ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ

ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI), ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (JMB) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ನೊಂದಿಗೆ ಸಂಘಟನೆಯು ಸಂಪರ್ಕ ಇಟ್ಟುಕೊಂಡಿದೆ ಎಂದು ಸರ್ಕಾರ ಉಲ್ಲೇಖಿಸಿದ್ದು, ಹಲವಾರು ಕ್ರಿಮಿನಲ್ ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಹೇಳಿದೆ.

ಇನ್ನು ಪಿಎಫ್‌ಐ ನಿಷೇಧಕ್ಕೆ ಯುಪಿ, ಕರ್ನಾಟಕ ಮತ್ತು ಗುಜರಾತ್ ಸರ್ಕಾರಗಳು ಒತ್ತಾಯಿಸಿದ್ದವು. ಕ್ರಮ ಕೈಗೊಳ್ಳದಿದ್ದರೆ ಆಗುವ ಅನಾಹುತಗಳ ಬಗ್ಗೆ ಈ ರಾಜ್ಯಗಳು ಕೇಂದ್ರಕ್ಕೆ ತಿಳಿಸಿದ್ದವು.

ಪಿಎಫ್​ಐ ನಿಷೇಧಕ್ಕೆ ಪ್ರಮುಖ ಕಾರಣಗಳು

  1. ಪಿಎಫ್‌ಐನ ಜಾಲ ಭಯಾನಕ ಭಯೋತ್ಪಾದಕ ಸಂಘಟನೆ ಐಸಿಸ್‌ನೊಂದಿಗೆ ಸಂಪರ್ಕ
  2. ದೇಶದ ಜನರಲ್ಲಿ ಭಯ ಮೂಡಿಸುವುದು ಇದರ ಪಿಎಫ್ ಐ ಉದ್ದೇಶವಾಗಿತ್ತು
  3. ಯುವಕರನ್ನು ವಂಚಿಸುವ ಮೂಲಕ ಅವರನ್ನು ಭಯೋತ್ಪಾದನೆಗೆ ತಳ್ಳುತ್ತಿದೆ.
  4. ನಿಷೇಧ ಅಧಿಸೂಚನೆಯಲ್ಲಿ ಕೊಲೆಗಳ ಬಗ್ಗೆ ಉಲ್ಲೇಖ
  5. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಹತ್ಯೆಗಳಲ್ಲಿ ಪಿಎಫ್‌ಐ ಭಾಗಿ
  6. 2018ರಲ್ಲಿ ಕೇರಳದಲ್ಲಿ ಅಭಿಮನ್ಯು, 2021ರ ನವೆಂಬರ್‌ನಲ್ಲಿ ಸಂಜಿತ್ ಮತ್ತು 2021ರಲ್ಲಿ ನಂದು ಹತ್ಯೆಯಲ್ಲಿ ಪಿಎಫ್‌ ಐ ಕೈವಾಡ.\
  7. 2019ರಲ್ಲಿ ತಮಿಳುನಾಡಿನ ರಾಮಲಿಂಗಂ, 2016ರಲ್ಲಿ ಶಶಿಕುಮಾರ್ ಹತ್ಯೆ
  8. 2017ರಲ್ಲಿ ಕರ್ನಾಟಕದಲ್ಲಿ ಶರತ್, ಆರ್, 2016ರಲ್ಲಿ ರುದ್ರೇಶ್, ಪ್ರವೀಣ್ ಪೂಜಾರಿ ಹಾಗೂ 2022ರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಪಿಎಫ್ ಐ ಕೈವಾಡ.
  9. ದೇಶದಲ್ಲಿ ಶಾಂತಿ ಕದಡುವುದು ಮತ್ತು ಜನರ ಮನಸ್ಸಿನಲ್ಲಿ ಭಯ ಮೂಡಿಸುವುದು ಈ ಹತ್ಯೆಗಳ ಏಕೈಕ ಉದ್ದೇಶ
  10. PFI ಸದಸ್ಯರು ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನದ ಸಂಪರ್ಕ\
  11. ಸಂಘಟನೆಯ ಚಟುವಟಿಕೆಗಳ ಬಗ್ಗೆ ಹಲವು ಪುರಾವೆಗಳು ಪತ್ತೆ
  12. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸುತ್ತಿವೆ ಪುರಾವೆಗಳು
  13. ಪಿಎಫ್‌ಐ ಸದಸ್ಯರು ಭಯೋತ್ಪಾದಕ ಗುಂಪುಗಳನ್ನು ಸೇರಲು ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನಕ್ಕೆ ಹೋಗಿದ್ದಾರೆ
  14. ಕೆಲವರನ್ನು ವಿವಿಧ ರಾಜ್ಯ ಪೊಲೀಸರು ಮತ್ತು ಕೇಂದ್ರ ಏಜೆನ್ಸಿಗಳು ಬಂಧಿಸಿವೆ
  15. ಪಿಎಫ್ ಐ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ
  16. ಪಿಎಫ್‌ಐ ಸಂಘಟನೆ ಹವಾಲಾ ಮತ್ತು ದೇಣಿಗೆ ಮೂಲಕ ಹಣ ಸಂಗ್ರಹಿಸುತ್ತದೆ
  17. ಮುಸ್ಲಿಂ ಮೂಲಭೂತವಾದವನ್ನು ಹರಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:26 pm, Wed, 28 September 22

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ