ಸಂಪುಟ ವಿಸ್ತರಣೆ ಚರ್ಚೆಗೆ ಎಐಸಿಸಿ ಅಧ್ಯಕ್ಷರನ್ನು ಬೇಟಿಯಾಗಲು ನಾನು ಬಂದಿರಲಿಲ್ಲ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ, ಅದರೆ ಹೈಕಮಾಂಡ್ ಅದನ್ನೂ ಮುಂದೂಡಿದೆ. ಕೆಎನ್ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಜವಾಬ್ದಾರಿವಹಿಸಿಕೊಳ್ಳಲು ತೋರುತ್ತಿರುವ ಉತ್ಸುಕತೆ ಬಗ್ಗೆ ಶಿವಕುಮಾರ್ ಅವರನ್ನು ಕೇಳಿದಾಗ, ರಾಜಕಾರಣವನ್ನು ಮಾಧ್ಯಮಗಳ ಮುಂದೆ ಮಾಡಲಾಗಲ್ಲ ಎಂದರು.
ದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಕ್ಕಿಲ್ಲ, ಒಂದೇ ಸ್ಥಾನ ಖಾಲಿ ಇರೋದು ಅದನ್ನು ತುಂಬುವ ಬಗ್ಗೆಯೂ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ದೆಹಲಿಯಲ್ಲಿ ಹೇಳಿದ ಡಿಕೆ ಶಿವಕುಮಾರ್ ತಾನು ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾದ ಕಾರಣವೇ ಬೇರೆ, ತಮ್ಮ ಸರ್ಕಾರವು ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು 100 ವರ್ಷ ಕಳೆದಿರುವ ಹಿನ್ನೆಲೆ ಮತ್ತು ಡಿಸೆಂಬರ್ 28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಇರೋದ್ರಿಂದ ಕಾರ್ಯಕ್ರಮಗಳನ್ನು ಬೆಳಗಾವಿಯಲ್ಲಿ ಆಯೋಜಿಸುವ ಬಗ್ಗೆ ನಿರ್ಧರಿಸಿದ್ದು ಅವುಗಳ ಬಗ್ಗೆ ಚರ್ಚೆ ನಡೆಸಲು ತಾನು ಬಂದಿದ್ದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಗೆಲುವಿಗೆ ಜೆಡಿಎಸ್-ಬಿಜೆಪಿ ಬೆಂಬಲಿಸಿವೆ: ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ