ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಿದೆ ಎಂದು ಹೇಳಿದ್ದೇನೆ: ಬಸವರಾಜ ರಾಯರೆಡ್ಡಿ, ಶಾಸಕ

Updated on: Apr 09, 2025 | 5:36 PM

ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತಾಡಲು ತನಗೆ ಹೇಳಿಲ್ಲ, ತಾನು ಏನೇ ಮಾತಾಡಿದರೂ ನೇರವಾಗಿ ಯಾವುದೇ ಮುಲಾಜಿಲ್ಲದೆ ಮಾತಾಡುತ್ತೇನೆ, ತಮ್ಮಲ್ಲಿ ಮೊದಲು ಸುಧಾರಣೆ ಆಗಬೇಕಿದೆ, ಯಾಕೆಂದತೆ ಜನಪ್ರತಿನಿಧಿಯೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ದಿನದಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ, ಈ ವ್ಯವಸ್ಥೆಯನ್ನು ತೊಡೆದುಹಾಕಲು ಮಾರ್ಗೋಪಾಯಗಳು ಬೇಕು ಎಂದು ರಾಯರೆಡ್ಡಿ ಹೇಳಿದರು.

ಬೆಂಗಳೂರು, ಏಪ್ರಿಲ್ 9: ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಸಿಎಂ ಆರ್ಥಿಕ ಸಲಹೆಗಾರ (CM’s Finance Adviser) ಮತ್ತು ಶಾಸಕ ಬಸವರಾಜ ರಾಯರೆಡ್ಡಿ ಅವರು ತಾನು ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅಂತ ಹೇಳಿಲ್ಲ, ಆದರೆ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಹಾಸುಹೊಕ್ಕಿದೆ ಅದನ್ನು ಶುಚಿಗೊಳಿಸಬೇಕಿದೆ ಎಂದು ಹೇಳಿದ್ದೇನೆ ಎಂದರು. ಸುಮಾರು ಎರಡು ದಶಕಗಳಿಂದ ತಾನು ಇದನ್ನು ಗಮನಿಸುತ್ತಿದ್ದೇನೆ, ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲೂ ಹೇಳಿದ್ದೇನೆ, ಕಲ್ಯಾಣ ಕರ್ನಾಟಕದಲ್ಲಿ ನಡೆಯುವ ಕಾಮಗಾರಿಗಳು ಹಳೇ ಮೈಸೂರು ಪ್ರಾಂತ್ಯದ ಕಾಮಗಾರಿಗಳಿಗೆ ಹೋಲಿಸಿದರೆ ಕಳಪೆಯಾಗಿವೆ, ಯಾಕೆ ಹೀಗೆ? ಈ ತಾರತಮ್ಮವನ್ನು ಸರಿಪಡಿಸಬೇಕಿದೆ ಅಂತ ರಾಯರೆಡ್ಡಿ ಹೇಳಿದರು.

ಇದನ್ನೂ ಓದಿ:  ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲಾ; ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ