ಬಿಕ್ಲು ಶಿವ ಕೊಲೆ ಪ್ರಕರಣ; 15 ಆರೋಪಿಗಳಲ್ಲಿ ಯಾರೊಬ್ಬರೂ ನನಗೆ ಪರಿಚಯವಿಲ್ಲ: ಭೈರತಿ ಬಸವರಾಜ, ಶಾಸಕ

Updated on: Jul 23, 2025 | 5:05 PM

ತನ್ನ ವಿರುದ್ಧ ಎಫ್​ಐಅರ್ ಆಗಿರುವ ಕಾರಣ ವಿಚಾರಣೆಗೆ ಕರೆಸುತ್ತಿದ್ದಾರೆ, ಪ್ರಕರಣದಲ್ಲಿ 15 ಆರೋಪಿಗಳನ್ನು ಹೆಸರಿಸಲಾಗಿದೆ, ಅವರಲ್ಲಿ ಯಾರೂ ತನಗೆ ಪರಿಚಯವಿಲ್ಲ, ತನಿಖೆ ಇನ್ನೂ ಜಾರಿಯಲ್ಲಿದೆ, ಪುನಃ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ, ಕರೆದಾಗೆಲ್ಲ ಹಾಜರಾಗುವ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ಒದಗಿಸುವ ಭರವಸೆ ನೀಡಿದ್ದೇನೆ ಎಂದು ಬಸವರಾಜ ಹೇಳಿದರು.

ಬೆಂಗಳೂರು, ಜುಲೈ 23: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಅರೋಪಿಯಾಗಿರುವ ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ ಇಂದು ಭಾರತೀನಗರ ಪೊಲೀಸರ ಎದುರು ಎರಡನೇ ಬಾರಿ ವಿಚಾರಣೆಗೆ (interrogation) ಹಾಜರಾದರು. ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಬಸವರಾಜ, ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ, ಕೊಲೆಗೂ ತನಗೂ ಯಾವುದೇ ರೀತಿಯ ಸಂಬಂಧವಿಲ್ಲ ಅಂತ ಮೊದಲ ದಿನದಿಂದ ಹೇಳಿಕೊಂಡು ಬಂದಿದ್ದೇನೆ ಎಂದು ಹೇಳಿದರು ತಾನೊಬ್ಬ ಜನ ಪ್ರತಿನಿಧಿಯಾಗಿರುವುದರಿಂದ ಜನರ ನಡುವೆ ಇರುತ್ತೇನೆ, ಜನ ಬಂದು ಫೋಟೋ, ಸೆಲ್ಫೀಗಳನ್ನು ತೆಗೆದುಕೊಳ್ಳುತ್ತಾರೆ, ಅವರು ಯಾರು, ಹಿನ್ನೆಲೆ ಏನು ಅನ್ನೋದು ಹೇಗೆ ಗೊತ್ತಾಗುತ್ತದೆ ಎಂದು ಬಸವರಾಜ ಪ್ರಶ್ನಿಸಿದರು.

ಇದನ್ನೂ ಓದಿ:   ಬಿಕ್ಲು ಶಿವ ಕೊಲೆ ಕೇಸ್: ಭೈರತಿ ಬಸವರಾಜ ಕೈವಾಡ ಇದೆ ಎಂದವರೇ ಈಗ ಅವರ ಪಾತ್ರವೇನೂ ಇಲ್ಲವೆನ್ನುತ್ತಿದ್ದಾರೆ: ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ