AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ಸಿಎಂ, ಡಿಸಿಎಂ ಮಾಡಿದ್ದರೂ ಆಶ್ಚರ್ಯವಿಲ್ಲ: ಎ ಮಂಜು, ಶಾಸಕ

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ಸಿಎಂ, ಡಿಸಿಎಂ ಮಾಡಿದ್ದರೂ ಆಶ್ಚರ್ಯವಿಲ್ಲ: ಎ ಮಂಜು, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 31, 2024 | 6:56 PM

ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಾವ ಕಾರಣಕ್ಕೂ ನಿಲ್ಲಿಸಲಾಗಲ್ಲ, ಯಾಕೆಂದರೆ ಅವುಗಳನ್ನು ಘೋಷಣೆ ಮಾಡಿದ್ದೇ ಕಾಂಗ್ರೆಸ್ ನಾಯಕರು, ಜನರೇನೂ ಯೋಜನೆಗಳನ್ನು ಕೇಳಿಕೊಂಡು ಅವರಲ್ಲಿಗೆ ಹೋಗಿರಲಿಲ್ಲ, ಅವುಗಳನ್ನು ನಿಲ್ಲಿಸುವ ಪ್ರಯತ್ನ ಸರಕಾರ ಮಾಡಿ ನೋಡಲಿ ಎಂದು ಎ ಮಂಜು ಎಚ್ಚರಿಸಿದರು.

ರಾಮನಗರ: ಶಕ್ತಿ ಯೋಜನೆ ನಿಲ್ಲಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿ ಹುನ್ನಾರ ನಡೆಸಿರುವ ಅನುಮಾನ ತನ್ನನ್ನು ಕಾಡುತ್ತಿದೆ ಎಂದು ಶಾಸಕ ಎ ಮಂಜು ಹೇಳಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮಂಜು, ಕೆರೆ, ಶಾಲೆ, ರಸ್ತೆಗಳನ್ನು ನಿರ್ಮಿಸಿದರೆ ಅಭಿವೃದ್ಧಿ, ಆದರೆ ಈ ಸರ್ಕಾರದಲ್ಲಿ ಅಬಿವೃದ್ಧಿಗಾಗಿ ಹಣವಿಲ್ಲ, ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಸಿಗುತ್ತಿದೆ ಉಳಿದವರಿಗೆ ಇಲ್ಲ, ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ನಿಲ್ಲಿಸುವ ಯೋಚನೆ ಸಿಎಂ ಮತ್ತು ಡಿಸಿಎಂರಲ್ಲಿ ಹುಟ್ಟಿದ್ದರೆ ಆಶ್ವರ್ಯವಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದುಡ್ಡಿರುವ ಮಹಿಳೆಯರು ಟಿಕೆಟ್ ಖರೀದಿಸಲಿ ಅವರನ್ನು ತಡೆದವರಾರು? ಶಕ್ತಿ ಯೋಜನೆ ಫಲಾನುಭವಿಗಳು

Published on: Oct 31, 2024 06:56 PM