ರಾಮನಗರ: ಶಕ್ತಿ ಯೋಜನೆ ನಿಲ್ಲಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿ ಹುನ್ನಾರ ನಡೆಸಿರುವ ಅನುಮಾನ ತನ್ನನ್ನು ಕಾಡುತ್ತಿದೆ ಎಂದು ಶಾಸಕ ಎ ಮಂಜು ಹೇಳಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮಂಜು, ಕೆರೆ, ಶಾಲೆ, ರಸ್ತೆಗಳನ್ನು ನಿರ್ಮಿಸಿದರೆ ಅಭಿವೃದ್ಧಿ, ಆದರೆ ಈ ಸರ್ಕಾರದಲ್ಲಿ ಅಬಿವೃದ್ಧಿಗಾಗಿ ಹಣವಿಲ್ಲ, ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಸಿಗುತ್ತಿದೆ ಉಳಿದವರಿಗೆ ಇಲ್ಲ, ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ನಿಲ್ಲಿಸುವ ಯೋಚನೆ ಸಿಎಂ ಮತ್ತು ಡಿಸಿಎಂರಲ್ಲಿ ಹುಟ್ಟಿದ್ದರೆ ಆಶ್ವರ್ಯವಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದುಡ್ಡಿರುವ ಮಹಿಳೆಯರು ಟಿಕೆಟ್ ಖರೀದಿಸಲಿ ಅವರನ್ನು ತಡೆದವರಾರು? ಶಕ್ತಿ ಯೋಜನೆ ಫಲಾನುಭವಿಗಳು
Published On - 6:56 pm, Thu, 31 October 24