2028ಕ್ಕೆ ನಾನೇನು ಎಲೆಕ್ಷನ್ಗೆ ನಿಲ್ಲಲ್ಲ: ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಅವರು ಎಸ್‌ಪಿ ರಂಜಿತ್ ಬಂಡಾರು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿರಿಗೆರೆ ಹೆಲಿಪ್ಯಾಡ್ ಬಳಿ ಕಾರು ನಿಲುಗಡೆ ನಿಯಮಗಳ ಬಗ್ಗೆ ಸಿಟ್ಟಾದ ಶಾಸಕರು, ತಹಸೀಲ್ದಾರ್ ಹಾಗೂ ಎಸ್‌ಪಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ನಾನೇನು 2028ಕ್ಕೆ ಚುನಾವಣೆಗೆ ನಿಲ್ಲಲ್ಲ ಎಂದು ಆಕ್ರೋಶದಿಂದ ಹೇಳಿಕೆ ನೀಡಿದರು.
ಚಿತ್ರದುರ್ಗ, ಸೆಪ್ಟೆಂಬರ್ 24: ಸಿರಿಗೆರೆ ಹೆಲಿಪ್ಯಾಡ್ ಬಳಿ ತಮ್ಮ ಕಾರನ್ನು ವೇದಿಕೆ ಸಮೀಪಕ್ಕೆ ಬಿಡದೆ ಅಡ್ಡಗಟ್ಟಿದ್ದಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಎಸ್ಪಿ ರಂಜಿತ್ ಬಂಡಾರು ವಿರುದ್ಧ ಪೂರ್ವ ವಲಯ ಐಜಿಪಿ ಎದುರೇ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ಕಾರ್ಯಕ್ರಮ ಮಾಡೋದು ನಾವು, ನೀವು ನಿಯಮ ಮಾಡ್ತೀರಾ? ಕೆಲಸಕ್ಕೆ ಬಾರದ ತಹಸೀಲ್ದಾರ್, ಎಸ್ಪಿ ಗಾಡಿ ಮುಂದೆ ನಿಲ್ಲಿಸಿ ನಮ್ಮ ಕಾರು ದೂರ ನಿಲ್ಲಿಸಿದರೆ ನಾವು ನಡೆದುಕೊಂಡು ಬರಬೇಕಾ? ಕಳೆದ ಬಾರಿ ಸಿಎಂ ಬಂದಾಗ 2 ಕಿ.ಮೀ ನಡೆದು ಬಂದಿದ್ದೇನೆ, ನೀವು ನಿಮ್ಮ ವಾಹನ ದೂರ ಹಾಕಿ ನಡೆದು ಬನ್ನಿ ನೋಡೋಣ. ನಾನು ವೇದಿಕೆ ಹತ್ತಲ್ಲ, ನೀವೇ ಕಾರ್ಯಕ್ರಮ ಮಾಡಿಕೊಳ್ಳಿ. ನಾನೇನು 2028ಕ್ಕೆ ಚುನಾವಣೆ ನಿಲ್ಲಲ್ಲ’ ಎಂದು ಕೆಸಿ ವೀರೇಂದ್ರ ಪಪ್ಪಿ ತೀವ್ರ ಆಕ್ರೋಶಗೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us