ಜನರ ಪ್ರೀತಿ ಇರೋವರೆಗೆ ರಾಜಕೀಯ ವೈರಿಗಳ ದ್ವೇಷಕ್ಕೆ ಹೆದರುವವನಲ್ಲ: ಸಿದ್ದರಾಮಯ್ಯ, ಸಿಎಂ

ಜನರ ಪ್ರೀತಿ ಇರೋವರೆಗೆ ರಾಜಕೀಯ ವೈರಿಗಳ ದ್ವೇಷಕ್ಕೆ ಹೆದರುವವನಲ್ಲ: ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2024 | 7:21 PM

ಹಿಂದುಳಿದ ವರ್ಗದಿಂದ ಬಂದಿರುವ ತಾನು ಎರಡು ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ತನ್ನ ರಾಜಕೀಯ ವೈರಿಗಳಿಗೆ ಅಗುತ್ತಿಲ್ಲ, ಅದರೆ ಅವರು ಏನೇ ಷಡ್ಯಂತ್ರ ಹೂಡಿದರೂ ತಾನು ಹೆದರುವವನಲ್ಲ ಎಂದು ಸಿದ್ದರಾಮಯ್ಯ ಎರಡೂ ಕೈಗಳನ್ನು ಅಗಲ ಮಾಡಿ ಹೇಳಿದರು.

ಹಾವೇರಿ: ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಬಡ ಜನತೆಗೆ ಆರ್ಥಿಕ ಶಕ್ತಿ ತಂಬುವ ಕೆಲಸ ತಮ್ಮಿಂದಾಗುತ್ತಿರುವುದರಿಂದ ರಾಜಕೀಯ ವೈರಿಗಳಿಗೆ ದ್ವೇಷ ಹುಟ್ಟಿಕೊಂಡಿದೆ, ಅವರು ವಿರೋಧಿಸುತ್ತಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅವರಿಗೆ ಹೊಟ್ಟೆಯುರಿ ಶುರುವಾಗಿದೆ ಎಂದು ಹೇಳಿದರು. ಅವರು ತನ್ನನ್ನು ಎಷ್ಟೇ ದ್ವೇಷಿಸಿದರೂ ಜನರ ಬೆಂಬಲ, ಪ್ರೀತಿ-ವಿಶ್ವಾಸ ತನ್ನ ಮೇಲೆ ಇರೋವರೆಗೆ ಅಲ್ಲಾಡಿಸಲಾಗಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ಗೆ ರಾಜಾತಿಥ್ಯ ಸಿಗುತ್ತಿರೋದು ಗೊತ್ತಾದ ಕೂಡಲೇ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ: ಸಿದ್ದರಾಮಯ್ಯ