ಯಾರೋ ಟ್ವೀಟ್ ಮಾಡಿದರೆ ನಾನು ಉತ್ತರ ಕೊಡಲ್ಲ, ಎದುರುಗಡೆ ಬಂದು ಮಾತಾಡಿದರೆ ಉತ್ತರಿಸುತ್ತೇನೆ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 27, 2025 | 9:39 PM

ಜಗ್ಗಿ ವಾಸುದೇವ್ ಅವರು ಮೈಸೂರಿನವರು, ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡಿದ್ದಾರೆ, ಈಗ ಸೇವ್ ಸಾಯ್ಲ್ ಅಂತ ಅಭಿಯಾನ ನಡೆಸುತ್ತಿದ್ದಾರೆ, ಇಶಾ ಫೌಂಡೇಶನ್ ಮೂಲಕ ರಾಜ್ಯದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ, ಅವರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿದ್ದೇನೆ, ಅವರೇ ಖುದ್ದಾಗಿ ಬಂದು ತನ್ನನ್ನು ಆಹ್ವಾನಿಸಿದರು ಹಾಗಾಗಿ ಕಾರ್ಯಕ್ರಮಕ್ಕೆ ಹೋಗಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಫೆ 27: ಮಹಾಶಿವರಾತ್ರಿ ನಿಮಿತ್ತ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ (Isha Foundation ) ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಖಡಕ್ ಉತ್ತರ ನೀಡಿದರು. ಯಾರೋ ಟ್ವೀಟ್ ಮಾಡಿದರೆ ತಾನದಕ್ಕೆ ತಲೆ ಕೆಡಿಸಿಕೊಳ್ಳಲ್ಲ, ತನ್ನ ಮುಂದೆ ಬಂದು ಮಾತಾಡಿದರೆ ಉತ್ತರ ನೀಡುತ್ತೇನೆ, ಇದು ತನ್ನ ವೈಯಕ್ತಿಕ ವಿಚಾರ, ನಿನ್ನೆ ಶಿವರಾತ್ರಿ ಅಂದರೆ ಶಿವನ ರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ, ತನ್ನ ಭಾಗವಹಿಸುವಿಕೆಯನ್ನು ಬಿಜೆಪಿ ಸ್ವಾಗತಿಸುತ್ತದೋ ಅಥವಾ ಕಾಂಗ್ರೆಸ್, ತನಗೆ ಅದ್ಯಾವುದೂ ಬೇಕಿಲ್ಲ, ಮಾಧ್ಯಮದವರೂ ಇದರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದ ಶಿವಕುಮಾರ್ ಕೊನೆಯಲ್ಲಿ ರಾಹುಲ್ ಗಾಂಧಿ ತನ್ನ ನಾಯಕ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಕುಮಾರ್ ಸಂಘಟನಾ ಚತುರ, ಸಿದ್ದರಾಮಯ್ಯ ಮಾಸ್ ಲೀಡರ್; ಇವರಲ್ಲದೆ ಬೇರೆ ನಾಯಕರೂ ನಮ್ಮಲ್ಲಿದ್ದಾರೆ: ಎಂಬಿ ಪಾಟೀಲ್

Published on: Feb 27, 2025 08:51 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.