ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯವಾಗದಿದ್ರೆ ರಾಜ್ಯ ರೆವಿನ್ಯೂ ಸರ್ಪ್ಲಸ್ ಒಳಗಡೆ ಬರಬಹುದು: ಶಿವಲಿಂಗೇಗೌಡ
ತಾನು ಮಾತಾಡುವಾಗ ಪದೇಪದೆ ಕೊಕ್ಕೆ ಹಾಕುತ್ತಿದ್ದ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಮೇಲೆ ಶಿವಲಿಂಗೇಗೌಡರು ಉಗ್ರರೂಪ ತಳೆದರು. ಮುನಿರಾಜ್ ಏನೋ ಹೇಳಲು ಪ್ರಯತ್ನಿಸಿದಾಗ ಗೌಡರು ಸಿಟ್ಟಿನಿಂದ ಸುಮ್ನೆ ಕೂತ್ಕೊಳ್ರೀ ನೀವು ಅಂತ ಹೇಳುತ್ತಾರೆ. ಅವರ ಸಿಟ್ಟು ಕಂಡು ಸಬಾಧ್ಯಕ್ಷ ಖಾದರ್ ಅವರಿಗೆ ನಗುವೋ ನಗು, ಅದು ಕಾಣದಂತೆ ಬಾಯಿಗೆ ಕೈ ಇಟ್ಟು ಮುನಿರಾಜ್ ಗೆ ನೀವು ಕೂತ್ಕೊಳ್ಳಿ ಅನ್ನುತ್ತಾರೆ!
ಬೆಂಗಳೂರು, 18 ಮಾರ್ಚ್: ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಸದನದಲ್ಲಿ ಮಾತಾಡಬೇಕಾದರೆ ಪೂರ್ಣ ತಯಾರಿಯೊಂದಿಗೆ ಬರುತ್ತಾರೆ. ಇವತ್ತು ಅವರು ಕೇಂದ್ರದಿಂದ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ಧೋರಣೆಯ ಅನುಸರಣೆಯಾಗುತ್ತಿದೆ ಎಂದು ಹೇಳಿದರು. ಕರ್ನಾಟಕದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ನಾಲ್ಕೂವರೆ ಸಾವಿರ ಲಕ್ಷ ಕೋಟಿ ರೂ. ಹಣ ಹೋಗುತ್ತಿದೆ ಅದರೆ ರಾಜ್ಯಕ್ಕೆ ಸಿಗುತ್ತಿರೋದು ಕೇವಲ 51 ಸಾವಿರ ಕೋಟಿ ಮಾತ್ರ, ಹಾಗೆಯೇ ಅನುದಾನಗಳ ಹೆಸರಲ್ಲಿ ಕೇಂದ್ರವು ರಾಜ್ಯಕ್ಕೆ ₹16,000 ಕೋಟಿ ಮಾತ್ರ ನೀಡುತ್ತಿದೆ, ರಾಜ್ಯ ಸರ್ಕಾರವು ಹೆಚ್ಚುವರಿ ಆದಾಯ (revenue surplus) ಒಳಗೆ ಬರಬೇಕಾದರೆ ಕೇಂದ್ರದ ತಾರತಮ್ಯ ಧೋರಣೆ ಇಲ್ಲವಾಗಬೇಕು ಎಂದು ಶಿವಲಿಂಗೇಗೌಡ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಮಿನಿಸ್ಟ್ರಾಗುವ ಆಸೆ ಖಂಡಿತ ಇದೆ: ಕೆಎಂ ಶಿವಲಿಂಗೇಗೌಡ