ಜಿಟಿ ದೇವೇಗೌಡ ಸಂಘಟನೆಗೆ ಮುಂದಾದರೆ ನಿನ್ನೆ ಮೊನ್ನೆ ಬಂದೋರು ಅವರ ಹಿಂದೆ ಹೋಗುತ್ತೇವೆ: ನಿಖಿಲ್ ಕುಮಾರಸ್ವಾಮಿ

Updated on: Jul 10, 2025 | 6:49 PM

ನಿನ್ನೆ ಮೊನ್ನೆ ಬಂದವರೆಲ್ಲ ಪಕ್ಷದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ತಾನ್ಯಾಕೆ ನಿನ್ನೆ ಮೊನ್ನೆ ಬಂದವನಾದೇನು? ಓಕೆ ಸರಿ, ತನು ಪಕ್ಷಕ್ಕೆ ಹೊಸಬ ಅಂತಾದ್ರೆ ಹಳಬರಾಗಿರುವವರು ಪಕ್ಷ ಸಂಘಟನೆಗೆ ಮುಂದೆ ಬಂದರೆ, ನಿನ್ನೆ ಮೊನ್ನೆ ಬಂದವರು ಅವರ ಹಿಂದೆ ಕೂರುತ್ತೇವೆ ಎಂದು ಹೇಳಿದರು.

ಕೋಲಾರ, ಜುಲೈ 10: ಜೆಡಿಎಸ್ ಪಕ್ಷದ ಹಿರಿಯ ನಾಯಕ ಜಿಟಿ ದೇವೇಗೌಡ ಅವರನ್ನು ಪಕ್ಷ ಯಾವತ್ತೂ ಕೈಬಿಟ್ಟಿಲ್ಲ, ಪಕ್ಷದ ಬ್ಯಾನರ್​ಗಳಲೆಲ್ಲ ಅವರ ಫೋಟೋ ಇದೆ, ಪಕ್ಷ ಅವರನ್ನು ದೂರ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಅವರು ದೇವೇಗೌಡರು ತಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾತ್ರ ಮೀಸಲು ಅಂತ ಹೇಳಿದ್ದಾರೆ, ಪಕ್ಷ ಅವರನ್ನು ಯಾವತ್ತೂ ನಿರ್ಲಕ್ಷಿಸಿಲ್ಲ, ಹಾಗೆ ನಿರ್ಲಕ್ಷಿಸಿದ್ದೇಯಾದರೆ ಅವರನ್ನು ಪಕ್ಷದ ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡುತ್ತಿರಲಿಲ್ಲ ಎಂದು ನಿಖಿಲ್ ಹೇಳಿದರು.

ಇದನ್ನೂ ಓದಿ:  ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ ಕುಮಾರಸ್ವಾಮಿ 85,000 ವೋಟು ಪಡೆದಿದ್ದಾನೆ: ಹೆಚ್ ಡಿ ರೇವಣ್ಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ