ಸುಧಾಕರ್ ಜನಪ್ರಿಯ ನಾಯಕನಾಗಿದ್ದರೆ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದು ಯಾಕೆ? ಎಸ್​ಆರ್ ವಿಶ್ವನಾಥ್

Updated on: Jan 30, 2025 | 5:36 PM

ಕೋವಿಡ್ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಚೆನ್ನಾಗಿ ಕೆಲಸ ಮಾಡಿದರೆಂದು ಬಸವರಾಜ ಬೊಮ್ಮಾಯಿ ಮೊದಲಾದವರು ಹೇಳುತ್ತಾರೆ, ಚೆನ್ನಾಗಿ ಕೆಲಸ ಮಾಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸೋತಿದ್ದು ಯಾಕೆ ಎಂದು ವಿಶ್ವನಾಥ್ ಪ್ರಶ್ನಿಸಿದರು. ಸಚಿವರಾಗಿದ್ದ ಅವರು ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಗೌರವ ಕೊಡೋದನ್ನು ಕಲಿಯಲಿ ಎಂದು ವಿಶ್ವನಾಥ್ ಹೇಳಿದರು.

ಬೆಂಗಳೂರು: ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಡಾ ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ಮಾತಾಡಿರುವುದಕ್ಕೆ ಪಕ್ಷದ ನಾಯಕರಿಂದ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಯಲಹಂಕದ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷನಿಗೆ ದುರಹಂಕಾರಿ, ಸರ್ವಾಧಿಕಾರಿ ಅಂತೆಲ್ಲ ಸುಧಾಕರ್ ಮಾತಾಡಿದ್ದು ಸರಿ ಕಂಡಿಲ್ಲ. ಅಸಲಿಗೆ ಸುಧಾಕರ್ ಅವರು ವಿಜಯೇಂದ್ರನ ಬಗ್ಗೆ ಬಹಿರಂಗವಾಗಿ ಮಾತಾಡಿದ್ದೇ ತಪ್ಪು, ಅವರ ದೂರು ದುಮ್ಮಾನಗಳನ್ನು ನೇರವಾಗಿ ವಿಜಯೇಂದ್ರ ಬಳಿ ಹೇಳಿಕೊಳ್ಳಬೇಕಿತ್ತು ಎಂದು ವಿಶ್ವನಾಥ ಹೇಳುತ್ತಾರೆ. ಅವರು ಪರೋಕ್ಷವಾಗಿ ತನ್ನ ವಿಷಯದಲ್ಲಿ ಮಾತಾಡಿದ ಕಾರಣ ಮಾಧ್ಯಮದವರ ಜೊತೆ ಮಾತಾಡುವ ಪ್ರಸಂಗ ಬಂದಿದೆ, ಇಲ್ಲವಾದರೆ ಪಕ್ಷದ ವಿಷಯಗಳನ್ನು ಬಹಿರಂಗವಾಗಿ ಅಥವಾ ಮಾಧ್ಯಮಗಳ ಮುಂದೆ ತಾನ್ಯಾವತ್ತೂ ಮಾತಾಡಿದವಲ್ಲ ಎಂದು ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಪಕ್ಷ ಬಿಟ್ಟು ಹೋಗುವುದಾದರೆ ಹೋಗಿ, ಸಂಸದ ಸುಧಾಕರ್​ಗೆ ಇದೆಂಥಾ ಮಾತು..!