ಅರವಿಂದ್ ಕೇಜ್ರಿವಾಲ್ ಮನೆಯೆದುರು ಕಸ ಸುರಿದ ಸಂಸದೆ ಸ್ವಾತಿ ಮಲಿವಾಲ್ ಅರೆಸ್ಟ್
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮುಂದೆ ಲೋಡ್ಗಟ್ಟಲೆ ಕಸ ಸುರಿದ ಸ್ವಾತಿ ಮಲಿವಾಲ್ ಅವರನ್ನು ಬಂಧಿಸಲಾಗಿದೆ. ಸ್ವಾತಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಹೊರಗೆ ಕಸ ಸುರಿಯುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು.
ನವದೆಹಲಿ: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮುಂದೆ ಲೋಡ್ಗಟ್ಟಲೆ ಕಸ ಸುರಿದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಸ್ವಾತಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಹೊರಗೆ ಕಸ ಸುರಿಯುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು.
ಇಂದು ಸ್ವಾತಿ ಮಲಿವಾಲ್ ಅವರು ಕಸದ ಗಾಡಿಯ ಜೊತೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂದೆ ಬಂದರು. ಇಲ್ಲಿ ಅವರು ಕಾರನ್ನು ನಿಲ್ಲಿಸಿ ಕಸ ಸುರಿಯಲು ಪ್ರಾರಂಭಿಸಿದರು. ಅವರ ಬೆಂಬಲಿಗರು ಕೈಯಲ್ಲಿ ‘ದೆಹಲಿಯಿಂದ ಕಸ ತೆಗೆದುಹಾಕಿ’ ಎಂಬ ಘೋಷಣೆಗಳನ್ನು ಬರೆದ ಫಲಕಗಳನ್ನು ಹಿಡಿದಿದ್ದರು. ಸ್ವಾತಿ ಮಲಿವಾಲ್ ಮೂರು ವಾಹನಗಳಲ್ಲಿ ಕಸ ತುಂಬಿಸಿ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರ ಮನೆಯ ಹೊರಗೆ ಹಾಕಿದ್ದರು. ಮಾಧ್ಯಮಗಳ ಕ್ಯಾಮೆರಾಗಳ ಮುಂದೆಯೇ ಕಸ ಸುರಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಪೊಲೀಸರು ಅವಳನ್ನು ವಶಕ್ಕೆ ಪಡೆದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ