‘ನಮ್ಮ ಉಗ್ರರನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದೇವೆ’; ವಿಶ್ವಸಂಸ್ಥೆಯಲ್ಲಿ ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ

Updated on: Sep 22, 2026 | 11:02 PM

ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ನೀಡಿದ ಎಚ್ಚರಿಕೆಯ ದಾಟಿಯ ಭಾಷಣದಲ್ಲಿ ಪಾಕ್ ಪ್ರಧಾನಿ ಷರೀಫ್, "ಒಂದು ವೇಳೆ ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸದೇ ಹೋಗಿದ್ದರೆ, ಆ ಉಗ್ರರು ಇಂದು ನ್ಯೂಯಾರ್ಕ್ ಅಥವಾ ಲಂಡನ್‌ನ ಬೀದಿಗಳಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರು. ಉಗ್ರರು ಅಮೆರಿಕ ಮತ್ತು ಬ್ರಿಟನ್ ದೇಶಗಳನ್ನು ಪ್ರವೇಶಿಸದಂತೆ ತಡೆದಿರುವುದೇ ಜಗತ್ತಿಗೆ ಹಾಗೂ ನಮಗೆ ಪಾಕಿಸ್ತಾನ ನೀಡಿರುವ ವಿನಮ್ರ ಕೊಡುಗೆ" ಎಂದು ಹೇಳಿಕೊಂಡಿದ್ದಾರೆ. 

ನ್ಯೂಯಾರ್ಕ್, ಸೆಪ್ಟೆಂಬರ್ 22: ತಾನು ಯಾವುದೇ ಉಗ್ರರಿಗೂ ಆಶ್ರಯ ನೀಡಿಲ್ಲ ಎಂದು ಪದೇಪದೆ ಸಮಜಾಯಿಷಿ ನೀಡುವ ಪಾಕಿಸ್ತಾನ ಇಂದು ವಿಶ್ವಸಂಸ್ಥೆಯ ಮಹಾಸಭೆಯ (UNGA) ವೇದಿಕೆಯಲ್ಲಿ ತಮ್ಮ ದೇಶದಲ್ಲಿ ಉಗ್ರರಿದ್ದಾರೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಇಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ನೀಡಿದ ಹೇಳಿಕೆಯೊಂದು ಜಾಗತಿಕ ಮಟ್ಟದಲ್ಲಿ ತೀವ್ರ ವ್ಯಂಗ್ಯ ಹಾಗೂ ಚರ್ಚೆಗೆ ಗ್ರಾಸವಾಗಿದೆ. ತಮ್ಮ ದೇಶವು ಉಗ್ರವಾದದ ವಿರುದ್ಧ ಹೋರಾಡುತ್ತಿದೆ ಎಂದು ಪ್ರತಿಪಾದಿಸುವ ಭರದಲ್ಲಿ, ಪಾಕಿಸ್ತಾನವೇ ಭಯೋತ್ಪಾದಕರ ಜಾಗತಿಕ ಕೇಂದ್ರ ಎಂಬುದನ್ನು ಸ್ವತಃ ಒಪ್ಪಿಕೊಂಡಂತೆ ಶೆಹಬಾಜ್ ಷರೀಫ್ ಮಾತನಾಡಿದ್ದಾರೆ.

ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ನೀಡಿದ ಎಚ್ಚರಿಕೆಯ ದಾಟಿಯ ಭಾಷಣದಲ್ಲಿ ಪಾಕ್ ಪ್ರಧಾನಿ ಷರೀಫ್, “ಒಂದು ವೇಳೆ ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸದೇ ಹೋಗಿದ್ದರೆ, ಆ ಉಗ್ರರು ಇಂದು ನ್ಯೂಯಾರ್ಕ್ ಅಥವಾ ಲಂಡನ್‌ನ ಬೀದಿಗಳಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರು. ಉಗ್ರರು ಅಮೆರಿಕ ಮತ್ತು ಬ್ರಿಟನ್ ದೇಶಗಳನ್ನು ಪ್ರವೇಶಿಸದಂತೆ ತಡೆದಿರುವುದೇ ಜಗತ್ತಿಗೆ ಹಾಗೂ ನಮಗೆ ಪಾಕಿಸ್ತಾನ ನೀಡಿರುವ ವಿನಮ್ರ ಕೊಡುಗೆ” ಎಂದು ಹೇಳಿಕೊಂಡಿದ್ದಾರೆ.

ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದ ನೆಲದಲ್ಲಿ ಅಮೆರಿಕ ಹಾಗೂ ಲಂಡನ್ ನಗರಗಳನ್ನೇ ಆಕ್ರಮಿಸುವಷ್ಟು ಅಪಾರ ಪ್ರಮಾಣದ ಉಗ್ರರು ಸಾಕುಪ್ರಾಣಿಗಳಂತೆ ಸಾಕಲಾಗುತ್ತಿದೆ ಎಂಬುದನ್ನು ಪಾಕ್ ಪ್ರಧಾನಿಯೇ ಜಾಗತಿಕ ವೇದಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಉಗ್ರರನ್ನು ಕಂಟ್ರೋಲ್‌ನಲ್ಲಿ ಇಟ್ಟಿದ್ದೇವೆ ಎಂದು ಹೇಳುವ ಮೂಲಕ ಪಾಕಿಸ್ತಾನವು ಅಮೆರಿಕ ಹಾಗೂ ಯುಕೆ ದೇಶಗಳಿಗೆ ಬೆದರಿಕೆ ಹಾಕಲು ಯತ್ನಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More