ಪವಿತ್ರಾ ಗೌಡ ಜೈಲಿಂದ ಬಿಡುಗಡೆಯಾದ ದಿನವೇ ಬೆಂಗಳೂರಿಗೆ ಬಂದಿಳಿದ ಮಾಜಿ ಪತಿ ಸಂಜಯ ಸಿಂಗ್
ಮಾಜಿ ಆದರೇನಂತೆ ಹಿಂದೊಮ್ಮೆ ಪವಿತ್ರಾರ ಪತಿಯಾಗಿದ್ದೆ, ಅವರ ಬದುಕಲ್ಲಿ ತಾನು ಇಲ್ಲದಿರಬಹುದು ಅದರೆ ತನ್ನ ಬದುಕಲ್ಲಿ ಅವರು ಯಾವತ್ತಿಗೂ ಇದ್ದಾರೆ, ಅವರು ಬೇಗ ಜೈಲಿಂದ ಹೊರಬರಲಿ ಅಂತ ದೇವರಲ್ಲಿ ಪ್ರತಿದಿನ ಪ್ರಾರ್ಥಿಸುತ್ತಿದ್ದೆ, ಅವರು ದೋಷಮುಕ್ತರಾಗಿ ಶಾಶ್ವತವಾಗಿ ಜೈಲಿಂದ ಆಚೆ ಬರಲಿ ಎಂದು ಹರಕೆ ಕೂಡ ಹೊತ್ತಿರುವುದಾಗಿ ಸಂಜಯ ಸಿಂಗ್ ಹೇಳುತ್ತಾರೆ.
ಬೆಂಗಳೂರು: ಇದು ಕಾಕತಾಳೀಯವೇ ಅಗಿರಬಹುದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಇವತ್ತು ಆಚೆ ಬಂದಿದ್ದಾರೆ. ಅವರ ಮಾಜಿ ಪತಿ ಸಂಜಯ ಸಿಂಗ್ ಸಹ ಇಂದೇ ಬೆಂಗಳೂರಿಗೆ ಆಗಮಿಸಿದ್ದು ಅವರೊಂದಿಗೆ ನಮ್ಮ ವರದಿಗಾರ ಮಾತಾಡಿದ್ದಾರೆ. ಸಂಜಯ ಮೊದಲು ಬೆಂಗಳೂರಲ್ಲಿ ಇದ್ದವರು ಈಗ ಬೇರೆ ರಾಜ್ಯದಲ್ಲಿದ್ದಾರೆ. ಬೇರೆ ಯಾವುದೋ ಕೆಲಸದ ನಿಮಿತ್ತ ಬಂದಿದ್ದೆ, ಪವಿತ್ರಾ ಗೌಡ ಇವತ್ತು ಜೈಲಿಂದ ಆಚೆ ಬಂದಿದ್ದು ವಿಮಾನ ನಿಲ್ದಾಣದಲ್ಲಿ ಗೊತ್ತಾಯಿತು, ದೇವರೇ ಈ ಏರ್ಪಾಟು ಮಾಡಿರಬಹುದು ಅಂತ ನನ್ನ ಭಾವನೆ, ಮೀಡಿಯ ಕಣ್ಣಿಗೆ ಬೀಳೋದು ಇಷ್ಟವಿರಲಿಲ್ಲ, ಆದರೆ ಮಾಧ್ಯಮದವರಿಗೆ ಹೇಗೋ ವಾಸನೆ ಹತ್ತಿಬಿಡುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪವಿತ್ರಾ ಗೌಡ ಜಾಮೀನು ಆದೇಶದ ಮಹತ್ವ ವಿವರಿಸಿದ ವಕೀಲೆ ಶಿಲ್ಪಾ