ಪವಿತ್ರಾ ಗೌಡ ಜಾಮೀನು ಆದೇಶದ ಮಹತ್ವ ವಿವರಿಸಿದ ವಕೀಲೆ ಶಿಲ್ಪಾ

Pavithra Gowda: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಅವರು ಇಂದು (ಡಿಸೆಂಬರ್ 17) ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಪವಿತ್ರಾ ಗೌಡ ಪರ ವಕೀಲೆ ಶಿಲ್ಪಾ ಅವರು ಪವಿತ್ರಾ ಗೌಡ ಅವರ ಜಾಮೀನು ಆದೇಶದ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ ಅವರ ಜಾಮೀನು ಆದೇಶ ‘ರಿಪೋರ್ಟೆಬಲ್ ಆರ್ಡರ್’ ಎಂದಿದ್ದಾರೆ ವಕೀಲೆ ಶಿಲ್ಪಾ.

ಪವಿತ್ರಾ ಗೌಡ ಜಾಮೀನು ಆದೇಶದ ಮಹತ್ವ ವಿವರಿಸಿದ ವಕೀಲೆ ಶಿಲ್ಪಾ
Pavithra Gowda
Follow us
ಮಂಜುನಾಥ ಸಿ.
|

Updated on: Dec 17, 2024 | 11:58 AM

ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಇಂದು (ಡಿಸೆಂಬರ್ 17) ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಶುಕ್ರವಾರವೇ ಅವರಿಗೆ ಜಾಮೀನು ದೊರೆತಿತ್ತು. ಸೋಮವಾರ ಅವರು ಜೈಲಿನಿಂದ ಹೊರಬರಲಿದ್ದಾರೆ ಎನ್ನಲಾಗಿತ್ತು. ಆದರೆ ಸೋಮವಾರ ಆರ್ಡರ್ ಕಾಪಿ ಬರುವುದು ತಡವಾದ ಕಾರಣ ಇಂದು ಮಂಗಳವಾರ ಅವರು ಜೈಲಿನಿಂದ ಹೊರಬಂದಿದ್ದಾರೆ. ಪವಿತ್ರಾ ಗೌಡ ಅವರ ಜಾಮೀನಿಗೆ ಸಂಬಂಧಿಸಿದಂತೆ ಅವರ ಪರ ವಕೀಲೆ ಶಿಲ್ಪಾ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

ವಕೀಲೆ ಶಿಲ್ಪೆ ಅವರು ಹೇಳಿರುವಂತೆ, ಪವಿತ್ರಾ ಗೌಡ ಅವರ ಜಾಮೀನು ಆದೇಶ ‘ರಿಪೋರ್ಟೆಬಲ್ ಆರ್ಡರ್’ (ಕಾನೂನಿನ ಹೊಸ ತತ್ವ). ಅಂದರೆ ದೇಶದ ನ್ಯಾಯಾಲಯಗಳು ಯಾವುದೇ ಪ್ರಕರಣಗಳ ತೀರ್ಪು ಅಥವಾ ಆದೇಶ ನೀಡುವ ಸಮಯದಲ್ಲಿ ಅದೇ ರೀತಿಯ ಬೇರೆ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ಆದೇಶ ನೀಡುತ್ತವೆ. ಪವಿತ್ರಾ ಗೌಡ ಅವರ ಜಾಮೀನು ಆದೇಶ ಅಂಥಹದ್ದೇ ಒಂದು ವಿಶೇಷ ಆದೇಶ ಆಗಿದೆ. ಅಂದರೆ ಬೇರೆ ಪ್ರಕರಣಗಳ ಆದೇಶಗಳನ್ನು ನೀಡುವಾಗ ಈ ಆದೇಶವನ್ನು ಗಣನೆಗೆ ತೆಗೆದುಕೊಂಡು ಆದೇಶ ನೀಡುವಂಥಹಾ ರಿಪೋರ್ಟೆಬಲ್ ಆರ್ಡರ್ ಇದಾಗಿದೆಯಂತೆ.

ಇದನ್ನೂ ಓದಿ:ಸೆಂಟ್ರಲ್ ಜೈಲಿಂದ ಹೊರಬಂದ ಪವಿತ್ರಾ ಗೌಡ ಮಾಧ್ಯಮದವರೊಂದಿಗೆ ಮಾತಾಡಲು ನಿರಾಕರಿಸಿದರು

ಪವಿತ್ರಾ ಗೌಡ ಪರವಾಗಿ ಹೈಕೋರ್ಟ್​ನಲ್ಲಿ ಹಿರಿಯ ವಕೀಲ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಶಿಲ್ಪಾ ಅವರು ಸಹ ಪವಿತ್ರಾ ಪರ ವಕೀಲರ ತಂಡದ ಸದಸ್ಯೆಯಾಗಿದ್ದಾರೆ. ರೇಣುಕಾ ಸ್ವಾಮಿ ಅಪಹರಣ ಹಾಗೂ ಕೊಲೆಯಲ್ಲಿ ಪವಿತ್ರಾ ಗೌಡ ಅವರ ಹಸ್ತಕ್ಷೇಪ ಇರಲಿಲ್ಲವೆಂದು ಅವರ ಪರ ವಕೀಲರು ವಾದ ಮಂಡಿಸಿದ್ದರು. ಪವಿತ್ರಾ ಅವರ ಮೊಬೈಲ್​ನಿಂದ ಮೂರನೇ ಆರೋಪಿ ಪವನ್, ರೇಣುಕಾ ಸ್ವಾಮಿಗೆ ಮೆಸೇಜ್ ಮಾಡಿದ್ದ ಹಾಗೂ ರೇಣುಕಾ ಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಪವಿತ್ರಾ ಘಟನೆ ನಡೆದ ಸ್ಥಳದಿಂದ ಹೊರಟು ಹೋಗಿದ್ದರು ಎಂದು ವಾದ ಮಂಡಿಸಲಾಗಿತ್ತು.

ಪವಿತ್ರಾ ಗೌಡ ಇಂದು (ಡಿಸೆಂಬರ್ 17) ಜೈಲಿನಿಂದ ಹೊರಬಂದಿದ್ದು, ಹೊರಬಂದ ಕೂಡಲೇ ಮುನೇಶ್ವರ ಸ್ವಾಮಿಗೆ ನಮಿಸಿದ್ದಾರೆ. ಪವಿತ್ರಾ ಅವರ ತಾಯಿ ಅವರು ಮುನೇಶ್ವರ ದೇವರಿಗೆ ಹರಕೆ ಹೊತ್ತುಕೊಂಡಿದ್ದರಂತೆ. ಪವಿತ್ರಾ ಅವರು ಜೈಲಿನಿಂದ ಬಂದ ಕೂಡಲೇ ಹರಕೆ ತೀರಿಸುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜುಲೈ 11 ರಂದು ಪವಿತ್ರಾ ಗೌಡ ಅವರ ಬಂಧನ ಆಗಿತ್ತು. ಮೊದಲ 14 ದಿನ ಪೊಲೀಸರ ವಶದಲ್ಲಿದ್ದ ಪವಿತ್ರಾ ಗೌಡ ಆ ನಂತರ ಸುಮಾರು ಆರು ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಯ ಕಳೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ