Loading video

ಬಿಬಿಎಂಪಿ ಚುನಾವಣೆ ಈ ವರ್ಷ ಕಳೆಯುವುದರೊಳಗೆ ನಡೆಯಲಿವೆ: ಡಿಕೆ ಶಿವಕುಮಾರ್

Updated on: May 16, 2025 | 11:34 AM

ಬಿಬಿಎಂಪಿ ನಮ್ಮ ಸ್ವಂತದಲ್ಲ, ಎಲ್ಲರಿಗೂ ಸೇರಿದ್ದು ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತೇವೆ, ಹೊಸ ಏರಿಯಾಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಬೇಕೆಂಬ ಉದ್ದೇಶವಿತ್ತು, ಆದರೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರಸ್ತಾವನೆಗೆ ತಯಾರಾಗುತ್ತಿಲ್ಲ, ನಿನ್ನೆ ಗ್ರೇಟರ್ ಬೆಂಗಳೂರು ಅಧಿನಿಯಮ ಜಾರಿಗೆ ಬಂದಿರುವ ಕಾರಣ ಉಳಿದ ಸಂಗತಿಗಳನ್ನು ಮುಂದೆ ನೋಡಿಕೊಂಡರಾದೀತು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಮೇ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP ) ಆದಷ್ಟು ಬೇಗ ಚುನಾವಣೆಗಳನ್ನು ನಡೆಸಲಾಗುತ್ತದೆ, ರಾಜ್ಯಪಾಲರು ಸಹ ಹೇಳಿದ್ದಾರೆ, ಚುನಾವಣೆ ಮುಂದೂಡುವುದರಲ್ಲಿ ಅರ್ಥವಿಲ್ಲ, ಇನ್ನು 4 ತಿಂಗಳೊಳಗೆ ಒಟ್ಟಿನಲ್ಲಿ ಈ ವರ್ಷ ಮುಗಿಯುವುದರೊಳಗೆ ನಡೆಸುತ್ತೇವೆ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಹೇಳಿದರು. ಸದ್ಯದಲ್ಲೇ ಮಿಸಲಾತಿ ಮತ್ತು ವಿಭಾಗಗಳ ಘೋಷಣೆ ಮಾಡಲಾಗುವುದು, ಮತ್ತು ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಹೇಳಿದ ಶಿವಕುಮಾರ್, ಈ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆಯಾಗಿದೆ, ವಿರೋಧ ಪಕ್ಷಗಳ ಶೇಕಡ 90ರಷ್ಟು ಅಭಿಪ್ರಾಯಗಳನ್ನು ಅಂಗೀಕರಿಸಿದ್ದೇವೆ ಎಂದರು.

ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಡಿಕೆ ಶಿವಕುಮಾರ್ ಕಲ್ಪನೆಯ ಕೂಸು, ಬೆಂಗಳೂರಲ್ಲಿ ವಿನೂತನ ಪ್ರಯೋಗ: ಜಿ ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ