ಘಟಪ್ರಭಾ ನದಿಯಲ್ಲಿ ಬಲೆಗೆ ಬಿದ್ದ ಬೃಹತ್ ಗಾತ್ರದ ಮೀನು; ಅಚ್ಚರಿಗೊಂಡ ಗ್ರಾಮಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2024 | 3:25 PM

ಮುಧೋಳ ತಾಲ್ಲೂಕಿನ ಮಾಚಕನೂರ (Machakanur) ಬಳಿಯ ಘಟಪ್ರಭಾ ನದಿಯಲ್ಲಿ ಬೃಹತ್ ಗಾತ್ರದ ಮೀನೊಂದು(Fish) ಬಲೆಗೆ ಬಿದ್ದಿದೆ. ಬಾರಿ ಗಾತ್ರದ ಮೀನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಇಷ್ಟು ತೂಕದ ಮೀನು  ಘಟಪ್ರಭಾ ನದಿಯಲ್ಲಿ ಅದು ಬಲೆಗೆ ಸಿಕ್ಕಿರುವುದು, ಇದೇ ಮೊದಲಾಗಿದೆ.

ಬಾಗಲಕೋಟೆ, ಜು.11: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಾಚಕನೂರ (Machakanur) ಬಳಿಯ ಘಟಪ್ರಭಾ ನದಿಯಲ್ಲಿ ಬೃಹತ್ ಗಾತ್ರದ ಮೀನೊಂದು(Fish) ಬಲೆಗೆ ಬಿದ್ದಿದೆ. ಈ ಮೀನಿನ ತೂಕ ಬರೋಬ್ಬರಿ 15 ಕೆ.ಜಿ ಇದ್ದು, ಬಾರಿ ಗಾತ್ರದ ಮೀನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಎಂದಿನಂತೆ ರೇವಣ್ಣ ಕೆಂಚಪ್ಪಗೋಳ ಎಂಬುವವರು ಮೀನು ಹಿಡಿಯಲು ಘಟಪ್ರಭಾ ನದಿಗೆ ಆಗಮಿಸಿದ್ದರು. ಈ ವೇಳೆ ಅಚ್ಚರಿ ಎಂಬಂತೆ ಬಾರೀ ತೂಕದ ಮೀನು ಬಲೆಗೆ ಬಿದ್ದಿದೆ. ಇಷ್ಟು ತೂಕದ ಮೀನು  ಘಟಪ್ರಭಾ ನದಿಯಲ್ಲಿ ಅದು ಬಲೆಗೆ ಸಿಕ್ಕಿರುವುದು, ಇದೇ ಮೊದಲು. ಹಾಗಾಗಿ ಜನರು ಬೆರಗಾಗಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on