ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಯುವತಿ ಸಾವು, ಐವರಿಗೆ ಗಾಯ; ಅಪಘಾತದ ದೃಶ್ಯ ಸೆರೆ

|

Updated on: Aug 14, 2024 | 2:49 PM

ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದು, ಐದು ಜನರಿಗೆ ಗಾಯವಾದ ಘಟನೆ ಹಾನಗಲ್ ಹೊರವಲಯದ ಗೊಂದಿ - ತಡಸ ರಸ್ತೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಹಾನಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾವೇರಿ, ಆ.14: ಜಿಲ್ಲೆಯ ಹಾನಗಲ್ ಹೊರವಲಯದ ಗೊಂದಿ – ತಡಸ ರಸ್ತೆಯಲ್ಲಿ ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದರೆ, ಐದು ಜನರಿಗೆ ಗಾಯವಾದ ಘಟನೆ ನಡೆದಿದೆ. ಹಾನಗಲ್​ ತಾಲೂಕಿನ ಮೂಡುರು ಗ್ರಾಮದ ಕೀರ್ತಿ ಮಣ್ಣಮ್ಮನವರ್(21) ಮೃತ ಯುವತಿ. ಹನುಮಂತಪ್ಪ (55), ರಕ್ಷಿತಾ (12), ಅಶ್ವಿತಾ (10), ವಿಜಯ (24), ಸುಮಾ (23) ಎಂಬುವವರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಗೆಜ್ಜೆಹಳ್ಳಿ ಗ್ರಾಮದಿಂದ ಹಾನಗಲ್ ಕಡೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಹಾನಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಈ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ