ದಾಯಾದಿಗಳ ನಡುವೆ ಜಮೀನು ಕಲಹ; 20 ವರ್ಷ ಹಳೆಯ ಸಪೋಟ ಮರಗಳ ನಾಶ
ದಾಯಾದಿಗಳ ನಡುವೆ ಇದ್ದ ಜಮೀನು ಕಲಹಕ್ಕೆ ಇಪ್ಪತ್ತು ವರ್ಷ ಹಳೆಯ ಸಪೋಟ ಮರಗಳನ್ನು ಕತ್ತರಿಸಿಹಾಕಿರುವ ಕರುಣಾಜನಕ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದಿದ್ದು, ಘಟನೆಯಿಂದ ರಾಮಚಂದ್ರಪ್ಪ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ, ಅಲ್ಲದೆ ಘಟನೆ ಸಂಬಂಧ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಲಾರ, ಆ.29: ದಾಯಾದಿಗಳ ನಡುವೆ ಇದ್ದ ಜಮೀನು ಕಲಹಕ್ಕೆ ಇಪ್ಪತ್ತು ವರ್ಷ ಹಳೆಯ ಸಪೋಟ ಮರಗಳನ್ನು ಕತ್ತರಿಸಿಹಾಕಿರುವ ಕರುಣಾಜನಕ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ರಾಮಚಂದ್ರಪ್ಪ ಎಂಬುವರು ಜಮೀನಿಗೆ ಸಂಬಂಧಪಟ್ಟಂತೆ ವಿವಾದ ಇತ್ತು. ಈ ವಿವಾದ ಆಗಾಗ ಗಲಾಟೆಯ ಸ್ವರೂಪ ಪಡೆದುಕೊಳ್ಳುತ್ತಿತ್ತು. ಹೀಗಿರುವಾಗ ಅದೇ ವಿಚಾರವಾಗಿ ಯಾರೋ ದುಷ್ಕರ್ಮಿಗಳು ಕಳೆದ ರಾತ್ರಿ ವಿವಾದಿತ ಜಮೀನಿನಲ್ಲಿದ್ದ ಸಪೋಟ ಮರಗಳನ್ನು ಕತ್ತರಿಸಿಹಾಕಿದ್ದಾರೆ. ಸುಮಾರು ಎರಡು ಎಕರೆಯಲ್ಲಿ ಬೆಳೆದಿದ್ದ ನೂರಾರು ಸಪೋಟ ಗಿಡಗಳನ್ನು ಕತ್ತರಿಸಿ ನಾಶ ಮಾಡಲಾಗಿದೆ. ಘಟನೆಯಿಂದ ರಾಮಚಂದ್ರಪ್ಪ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ, ಅಲ್ಲದೆ ಘಟನೆ ಸಂಬಂಧ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos