ಮಂಗಳೂರು: ಮನೆಯ ಹೊರಗಡೆ ಮಲಗಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 12, 2024 | 4:45 PM

ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಲಗ್ಗೆಯಿಡುತ್ತಿವೆ. ಅದರಂತೆ ಇದೀಗ ಮಂಗಳೂರಿನ ಬಜ್ಪೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ನಿನ್ನೆ(ಗುರುವಾರ) ರಾತ್ರಿ ಪುಚ್ಚಾಳದ ಸುಂದರ್​ ಎಂಬುವವರ ಮನೆಯ ನಾಯಿ ಮರಿಯನ್ನು ಚಿರತೆ ಹೊತ್ತೊಯ್ದಿದೆ. ಚಿರತೆ ನಾಯಿಯನ್ನು ಬೇಟೆಯಾಡಿದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಕ್ಷಿಣ ಕನ್ನಡ, ಜು.12: ಇತ್ತೀಚೆಗೆ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಲಗ್ಗೆಯಿಡುತ್ತಿವೆ. ಅದರಂತೆ ಇದೀಗ ಮಂಗಳೂರಿನ ಬಜ್ಪೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡಲು ಕೂಡ ಭಯಪಡುವ ಸನ್ನಿವೇಷ ರೂಪುಗೊಳ್ಳುತ್ತಿದೆ. ಹೌದು, ನಿನ್ನೆ(ಗುರುವಾರ) ರಾತ್ರಿ ಮಂಗಳೂರು ಹೊರವಲಯದ ಬಜ್ಪೆಯ ಪೆರಾರ ಎಂಬಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಪುಚ್ಚಾಳದ ಸುಂದರ್​ ಎಂಬುವವರ ಮನೆಯ ನಾಯಿ ಮರಿಯನ್ನು ಚಿರತೆ ಹೊತ್ತೊಯ್ದಿದೆ. ಚಿರತೆ ನಾಯಿಯನ್ನು ಬೇಟೆಯಾಡಿದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾತ್ರಿ ವೇಳೆ ಮನೆ ಮುಂದೆ ಮಲಗಿದ್ದ ನಾಯಿ ಮರಿಯನ್ನ ನೋಡಿದ ಚಿರತೆ, ಕಳ್ಳನಂತೆ ಬಂದು ಹೊತ್ತೊಯ್ದಿದೆ. ಕಳೆದ ಕೆಲ‌ದಿನಗಳಿಂದ ಬಜಪೆ ಪರಿಸರದಲ್ಲಿ ಚಿರತೆ ಒಡಾಡುತ್ತಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ನಾಗರಿಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ