ಬೆಂಗಳೂರಿನಲ್ಲಿ ಪ್ರತಿಭಟನೆ ಹೆಸರಲ್ಲಿ ಹೋಟೆಲ್​ಗೆ ನುಗ್ಗಿ ದಾಂಧಲೆ; ವಿಡಿಯೋ ಇಲ್ಲಿದೆ

ಬಂದ್​ ಇದ್ರೂ ಬಾಗಿಲು ಮುಚ್ಚಿಲ್ಲ ಎಂದು ಇಬ್ಬರಿಂದ ಜಯನಗರದಲ್ಲಿರುವ ಉಡುಪಿ ಹಬ್​ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದ್ದು, ಈ ಕುರಿತು ಹೋಟೆಲ್​ ಮಾಲೀಕರು ದೂರು ನೀಡಿದ್ದಾರೆ.

ಬೆಂಗಳೂರು, ಸೆ.26: ಕಾವೇರಿ ನದಿ(Cauvery River) ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್​ ಆದೇಶ ನೀಡಿದ್ದು, ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಇಂದು(ಸೆ.26) ಪ್ರತಿಭಟನೆ ನಡೆಯುತ್ತಿದೆ. ಅದರಂತೆ ಇದೀಗ ಹೋರಾಟದ ಹೆಸರಿನಲ್ಲಿ ಹೋಟೆಲ್​ಗೆ ನುಗ್ಗಿ ದಾಂಧಲೆ ಓರ್ವ ವ್ಯಕ್ತಿ ಧಾಂದಲೆ ಮಾಡಿದ್ದಾನೆ. ಹೌದು, ಬಂದ್​ ಇದ್ರೂ ಬಾಗಿಲು ಮುಚ್ಚಿಲ್ಲ ಎಂದು ಇಬ್ಬರಿಂದ ಜಯನಗರ(Jayanagara)ದಲ್ಲಿರುವ ಉಡುಪಿ ಹಬ್​ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದ್ದು, ಈ ಕುರಿತು ಹೋಟೆಲ್​ ಮಾಲೀಕರು ದೂರು ನೀಡಿದ್ದಾರೆ. ಅವರ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಇದೀಗ ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ವೇಳೆ ಇವರು ಜಯನಗರ ಎಂಎಲ್​ಎ ರಾಮಮೂರ್ತಿ ಶಿಷ್ಯರೆಂದು ತಿಳಿದು ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us