Loading video

IND vs AUS: ಲಬುಶೇನ್ ರನ್ ಓಡದಂತೆ ತಡೆದ ಜಡೇಜಾ; ಐಸಿಸಿಯಿಂದ ಬೀಳುತ್ತಾ ದಂಡ? ವಿಡಿಯೋ

Updated on: Mar 04, 2025 | 5:25 PM

Champions Trophy 2025: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡುವ ವೇಳಿ ಬೌಲಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ, ನಾನ್ ಸ್ಟ್ರೈಕ್​ನಲ್ಲಿ ನಿಂತಿದ್ದ ಮಾರ್ನಸ್ ಲಬುಶೇನ್​ರನ್ನು ರನ್ ಓಡದಂತೆ ತಡೆದಿದ್ದಾರೆ. ಇದೀಗ ಐಸಿಸಿ ನಿಯಮ ಮುರಿದಿರುವ ಜಡೇಜಾಗೆ ದಂಡದ ಬರೆ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡುವ ವೇಳಿ ಬೌಲಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ, ನಾನ್ ಸ್ಟ್ರೈಕ್​ನಲ್ಲಿ ನಿಂತಿದ್ದ ಮಾರ್ನಸ್ ಲಬುಶೇನ್​ರನ್ನು ರನ್ ಓಡದಂತೆ ತಡೆದಿದ್ದಾರೆ. ಹೀಗಾಗಿ ಜಡೇಜಾ ವಿರುದ್ಧ ಐಸಿಸಿ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ. ವಾಸ್ತವವಾಗಿ ಆಸೀಸ್ ಇನ್ನಿಂಗ್ಸ್​ನ 21 ನೇ ಓವರ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ರನ್ ಗಳಿಸುವ ಅವಕಾಶ ಸಿಕ್ಕಿತು. ಆ ಓವರ್‌ನ ಎರಡನೇ ಎಸೆತದಲ್ಲಿ, ಸ್ಮಿತ್ ಜಡೇಜಾ ಎಸೆತವನ್ನು ಆನ್ ಡ್ರೈವ್ ಮಾಡಿದರು ಆದರೆ ಜಡೇಜಾ ತಮ್ಮ ಬಲಭಾಗಕ್ಕೆ ಓಡುವ ಮೂಲಕ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಆದರೆ ಜಡೇಜಾ ಅವರ ಪಾದವನ್ನು ತಾಗಿ ಶಾರ್ಟ್ ಮಿಡ್‌ವಿಕೆಟ್ ಕಡೆಗೆ ಹೋಯಿತು. ನಂತರ ಸ್ಮಿತ್ ಮತ್ತು ಲಬುಶೇನ್ ರನ್ ಗಳಿಸಲು ಪ್ರಯತ್ನಿಸಿದರು. ಸ್ಮಿತ್ ತನ್ನ ಕ್ರೀಸ್‌ನಿಂದ ಎರಡು ಹೆಜ್ಜೆ ಮುಂದಿಟ್ಟರು. ಆದರೆ ಜಡೇಜಾ ನಾನ್ ಸ್ಟ್ರೈಕ್​ನಲ್ಲಿ ನಿಂತಿದ್ದ ಲಬುಶೇನ್​ರನ್ನು ಒಂದು ಹೆಜ್ಜೆ ಮುಂದಿಡದಂತೆ ತಬ್ಬಿ ಹಿಡಿದರು. ಆ ಕ್ಷಣದಲ್ಲಿ ಅಂಪೈರ್ ಯಾವುದೇ ಕ್ರಮಕೈಗೊಳ್ಳದಿದ್ದರೂ, ಪಂದ್ಯದ ನಂತರ ಐಸಿಸಿ, ಜಡೇಜಾ ವಿರುದ್ಧ ಕ್ರಮಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Published on: Mar 04, 2025 05:24 PM