Loading video

IND vs AUS: ವರುಣ್ ಸ್ಪಿನ್ ಮೋಡಿಗೆ ತಲೆಬಾಗಿದ ಟ್ರಾವಿಸ್ ಹೆಡ್; ವಿಡಿಯೋ ನೋಡಿ

|

Updated on: Mar 04, 2025 | 4:35 PM

Champions Trophy 2025: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಟ್ರಾವಿಸ್ ಹೆಡ್ ಅವರ ಬ್ಯಾಟ್ ಅಬ್ಬರಿಸಲು ಅವಕಾಶ ಸಿಗಲಿಲ್ಲ. ಭಾರತದ ವಿರುದ್ಧ 39 ರನ್ ಗಳಿಸಿ ಹೆಡ್ ಔಟಾದರು. ವರುಣ್ ಚಕ್ರವರ್ತಿಯ ಸ್ಪಿನ್ ಮ್ಯಾಜಿಕ್ ಅರ್ಥ ಮಾಡಿಕೊಳ್ಳದ ಹೆಡ್, ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಶುಭ್​ಮನ್​ ಗಿಲ್​ಗೆ ಕ್ಯಾಚಿತ್ತು ಔಟಾದರು.

ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ‘ಮಿಸ್ಟರಿ ಸ್ಪಿನ್ನರ್’ ವರುಣ್ ಚಕ್ರವರ್ತಿ ಅದ್ಭುತ ಪ್ರದರ್ಶನ ನೀಡಿ, ಭಾರತಕ್ಕೆ ಮಾತ್ರವಲ್ಲದೆ ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ್ದ ವಿಕೆಟ್ ಉರುಳಿಸಿದರು. ದುಬೈ ಪಿಚ್‌ನಲ್ಲಿ ವರುಣ್ ಮತ್ತೊಮ್ಮೆ ತಮ್ಮ ಸ್ಪಿನ್ ಮ್ಯಾಜಿಕ್ ಬಳಸಿ ಆಸ್ಟ್ರೇಲಿಯಾದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರ ಆಟವನ್ನು ಕೊನೆಗೊಳಿಸಿದರು. ವರುಣ್ ಚೆಂಡನ್ನು ಹೆಡ್ ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಶುಭಮನ್ ಗಿಲ್ ಅವರಿಗೆ ಕ್ಯಾಚ್ ನೀಡಿ ಔಟಾದರು.