VIDEO: ಚೊಚ್ಚಲ ಶತಕವನ್ನು ಸೈನಿಕರಿಗೆ ಅರ್ಪಿಸಿದ ಧ್ರುವ್ ಜುರೆಲ್
India vs West Indies 1st Test: ಈ ಪಂದ್ಯದಲ್ಲಿ 210 ಎಸೆತಗಳನ್ನು ಎದುರಿಸಿದ ಧ್ರುವ್ ಜುರೆಲ್ 3 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 125 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಕಲೆಹಾಕಿದೆ.
ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದಾರೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧ್ರುವ್ 190 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಶತಕದ ಬೆನ್ನಲ್ಲೇ ಗನ್ ಸೆಲೆಬ್ರೇಷನ್ ಮಾಡಿ ಗಮನ ಸೆಳೆದಿದ್ದರು. ಈ ಮೂಲಕ ತಮ್ಮ ಚೊಚ್ಚಲ ಶತಕವನ್ನು ಭಾರತೀಯ ಸೈನಿಕರಿಗೆ ಅರ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಧ್ರುವ್ ಜುರೆಲ್, ಭಾರತೀಯ ಸೈನಿಕರು ಎಷ್ಟು ಕಷ್ಟ ಪಡುತ್ತಾರೆ ಎಂಬುದು ನನಗೆ ಗೊತ್ತಿದೆ. ಏಕೆಂದರೆ ನನ್ನ ತಂದೆ ಕೂಡ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದವರು. ಹೀಗಾಗಿ ಚೊಚ್ಚಲ ಶತಕ ಪೂರೈಸಿದ ಬಳಿಕ ನಾನು ಗನ್ ಸೆಲೆಬ್ರೇಷನ್ ಮಾಡಿ, ಸೆಂಚುರಿಯನ್ನು ಭಾರತೀಯ ಸೈನಿಕರಿಗೆ ಅರ್ಪಿಸಿದ್ದೇನೆ ಎಂದಿದ್ದಾರೆ.
ಇನ್ನು ಈ ಪಂದ್ಯದಲ್ಲಿ 210 ಎಸೆತಗಳನ್ನು ಎದುರಿಸಿದ ಧ್ರುವ್ ಜುರೆಲ್ 3 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 125 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಕಲೆಹಾಕಿದೆ.
ವೆಸ್ಟ್ ಇಂಡೀಸ್- 162 (ಮೊದಲ ಇನಿಂಗ್ಸ್)
ಭಾರತ- 448/5 (ಮೊದಲ ಇನಿಂಗ್ಸ್)

