ಪಾಕಿಸ್ತಾನಕ್ಕೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷಗಳೇ ಬೇಕು; ಅಮಿತ್ ಶಾ

Updated on: May 30, 2025 | 4:07 PM

“ಭಾರತದ ಗಡಿಗಳಲ್ಲಿ ಯಾವುದೇ ರೀತಿಯ ದಾಳಿ ನಡೆದಾಗಲೆಲ್ಲಾ ಮೊದಲು ಅದರ ಹೊರೆಯನ್ನು ಹೊರುವವರು ನಮ್ಮ ಬಿಎಸ್‌ಎಫ್ ಜವಾನರು. ಆದರೆ ಅವರು ಎಂದಿಗೂ ಗಡಿ ಎಲ್ಲಿದೆ ಎಂದು ಪರಿಗಣಿಸಲು ವಿರಾಮ ತೆಗೆದುಕೊಳ್ಳುವುದಿಲ್ಲ" ಎಂದು ಅಮಿತ್ ಶಾ ಹೇಳಿದರು. ಇದೇ ವೇಳೆ ಕೇಂದ್ರ ಗೃಹ ಸಚಿವರು ಸರ್ಕಾರ ಮತ್ತು ಭಾರತದ ನಾಗರಿಕರ ಪರವಾಗಿ ಬಿಎಸ್‌ಎಫ್ ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀನಗರ, ಮೇ 30: ಪಾಕಿಸ್ತಾನಕ್ಕೆ ಬಿಎಸ್‌ಎಫ್ ಭಾರಿ ಹೊಡೆತ ನೀಡಿದೆ, ಇದನ್ನು ಜಯಿಸಲು ವರ್ಷಗಳೇ ಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಆಕ್ರಮಣಕ್ಕೆ ಬಿಎಸ್‌ಎಫ್ ನೀಡಿದ ಪ್ರತಿಕ್ರಿಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಶ್ಲಾಘಿಸಿದರು. ಜಮ್ಮು ಗಡಿಯಲ್ಲಿ ಪ್ರತೀಕಾರದ ಕ್ರಮದಲ್ಲಿ 118ಕ್ಕೂ ಹೆಚ್ಚು ಶತ್ರು ಠಾಣೆಗಳು ನಾಶವಾಗಿವೆ ಮತ್ತು ಹಾನಿಗೊಳಗಾಗಿವೆ ಎಂದು ಅಮಿತ್ ಶಾ ಹೇಳಿದರು. ಆಪರೇಷನ್ ಸಿಂಧೂರ್ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಮೊದಲ ಭೇಟಿಯ ಸಮಯದಲ್ಲಿ ಬಿಎಸ್​ಎಫ್ ಯೋಧರೊಂದಿಗೆ ಅಮಿತ್ ಶಾ ಸಂವಾದ ನಡೆಸಿದರು. “ನಮ್ಮ ಗಡಿಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ಪಾಕಿಸ್ತಾನ ನಮ್ಮ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯಿಸಿತ್ತು. ಅದಕ್ಕೆ ಪ್ರತಿಯಾಗಿ ಜಮ್ಮು ಗಡಿನಾಡಿನ ಬಿಎಸ್‌ಎಫ್ ಜವಾನರು 118ಕ್ಕೂ ಹೆಚ್ಚು ಠಾಣೆಗಳನ್ನು ನಾಶಪಡಿಸುವ ಮತ್ತು ಹಾನಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡರು” ಎಂದು ಅಮಿತ್ ಶಾ ಹೇಳಿದರು.

“ಭಾರತದ ಗಡಿಗಳಲ್ಲಿ ಯಾವುದೇ ರೀತಿಯ ದಾಳಿ ನಡೆದಾಗಲೆಲ್ಲಾ ಮೊದಲು ಅದರ ಹೊರೆಯನ್ನು ಹೊರುವವರು ನಮ್ಮ ಬಿಎಸ್‌ಎಫ್ ಜವಾನರು. ಆದರೆ ಅವರು ಎಂದಿಗೂ ಗಡಿ ಎಲ್ಲಿದೆ ಎಂದು ಪರಿಗಣಿಸಲು ವಿರಾಮ ತೆಗೆದುಕೊಳ್ಳುವುದಿಲ್ಲ” ಎಂದು ಅಮಿತ್ ಶಾ ಹೇಳಿದರು. ಇದೇ ವೇಳೆ ಕೇಂದ್ರ ಗೃಹ ಸಚಿವರು ಸರ್ಕಾರ ಮತ್ತು ಭಾರತದ ನಾಗರಿಕರ ಪರವಾಗಿ ಬಿಎಸ್‌ಎಫ್ ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದರು. “ಸೈನ್ಯದಷ್ಟೇ ಬಿಎಸ್‌ಎಫ್‌ಗೂ ಜಯಘೋಷಗಳು ಜೋರಾಗಿವೆ. ಅದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬಿಎಸ್‌ಎಫ್ ಯೋಧರ ಶೌರ್ಯ ಮತ್ತು ತ್ಯಾಗಗಳು ರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿವೆ” ಎಂದು ಅಮಿತ್ ಶಾ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ