ಕುಮಾರಸ್ವಾಮಿ ಚಳುವಳಿ ಮಾಡುವ ಬದಲು ಕೇಂದ್ರದಿಂದ ರಾಜ್ಯಕ್ಕೆ ಯೂರಿಯಾ ಬಿಡುಗಡೆ ಮಾಡಿಸಲಿ: ಸಿದ್ದರಾಮಯ್ಯ
ಮಾಧ್ಯಮಗಳಲ್ಲಿ ಈಗಾಗಲೇ ವರದಿಯಯಾಗಿರುವಂತೆ ಸಿದ್ದರಾಮಯ್ಯ ಯೂರಿಯಾ ರಸಗೊಬ್ಬರ ಕೊರತೆ ಸಂಬಂಧಿಸಿದಂತೆ ಕೇಂದ್ರ ರಸಗೊಬ್ಬರ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರವೊಂದನ್ನು ಬರೆದು ಕೇಂದ್ರವು ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 11.17 ಲಕ್ಷ ಟನ್ ಯೂರಿಯಾ ಹಂಚಿಕೆ ಮಾಡಿದ್ದರೂ ಅದರ ಅರ್ಧಕ್ಕಿಂತ ಕಡಿಮೆ ಪ್ರಮಾಣದ ರಸಗೊಬ್ಬರ ಪೂರೈಕೆಯಾಗಿದೆ, ಮಿಕ್ಕ ದಾಸ್ತಾನನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಹೇಳಿದ್ದಾರೆ.
ಮಂಡ್ಯ, ಜುಲೈ 28: ಜಿಲ್ಲೆಯ ಮದ್ದೂರಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೂರಿಯ ಅಭಾವದ ವಿಷಯದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯರನ್ನು (Union Minister HD Kumaraswamy ) ಟೀಕಿಸಿದರು. ಕುಮಾರಸ್ವಾಮಿ ಕೇಂದ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ, ಅವರು ಅಲ್ಲಿ ಸಂಬಂಧಪಟ್ಟವರೊಂದಿಗೆ ಮಾತಾಡಿ ರಾಜ್ಯಕ್ಕೆ ರಸಗೊಬ್ಬರ ಕಳಿಸುವುದನ್ನು ಬಿಟ್ಟು ಚಳುವಳಿ ಮಾಡುತ್ತೇವೆಂದು ಹೇಳುತ್ತಾರೆ, ರಾಜ್ಯದಲ್ಲಿ ಯೂರಿಯಾದ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ, ಮಂಡ್ಯ, ಹಾವೇರಿ, ಕೊಪ್ಪಳ-ಹೀಗೆ ರಾಜ್ಯದ ಯಾವ ಭಾಗದಲ್ಲೂ ಯೂರಿಯಾ ಸಿಗುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಒಂದು ಕೆರೆ ಕಟ್ಟಲಾಗದ ಸಿದ್ದರಾಮಯ್ಯ, ಕೆಅರ್ಎಸ್ ಕಟ್ಟಿದ ಒಡೆಯರ್ ನಡುವೆ ಎಂಥ ಹೋಲಿಕೆ? ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
