ನೇಹಾ ಹತ್ಯೆ ಪ್ರಕರಣ ತನಿಖೆ ಚುರುಕು, ನಿರಂಜನ್ ಹಿರೇಮಠ ಮನೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳು

|

Updated on: Apr 25, 2024 | 1:00 PM

ನಾವು ವರದಿ ಮಾಡಿರುವ ಹಾಗೆ, ನಿನ್ನೆ ಹುಬ್ಬಳ್ಳಿಯ ಜೈಲಲ್ಲಿದ್ದ ಫಯಾಜ್ ನನ್ನು ನಿನ್ನೆ ತಮ್ಮ ವಶಕ್ಕೆ ಪಡೆದಿರುವ ಅಧಿಕಾರಿಗಳು, ಅವನ ವೈದ್ಯಕೀಯ ಪರೀಕ್ಷೆ ನಡೆಸಿ ಕೊಲೆ ನಡೆದ ಸ್ಥಳಕ್ಕೆ ಮಹಜರ್ ಗಾಗಿ ಕರೆತಂದಿದ್ದರು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದ ನಿರಂಜನ್ ಹಿರೇಮಠ ಮನೆಗೆ ಭೇಟಿ ನೀಡಲಿದ್ದಾರೆ.

ಹುಬ್ಳಳ್ಳಿ: ಹುಬ್ಳಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ (Neha Hiremath murder case) ತನಿಖೆ ಚುರುಕುಗೊಂಡಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ()CID Sleuths) ಇಂದು ಬೆಳಗ್ಗೆ ನಿರಂಜನ ಹಿರೇಮಠ (Niranjan Hiremath) ಅವರ ಮನೆಗೆ ಆಗಮಿಸಿದರು. ನಿರಂಜನ್ ಹಿರೇಮಠ ಮತ್ತು ಗೀತಾ ಹಿರೇಮಠ ಅವರನ್ನು ಅಧಿಕಾರಿಗಳು ಪ್ರಶ್ನಿಸಲಿರುವುದನ್ನು ನಿರೀಕ್ಷಿಸಲಾಗಿತ್ತು. ಏನೆಲ್ಲ ಪ್ರಶ್ನೆಗಳನ್ನು ಸಿಐಡಿ ಕೇಳಿದರು ಅನ್ನೋದು ಮಾಧ್ಯಮಗಳಿಗೆ ಗೊತ್ತಾಗುವ ಸಾಧ್ಯತೆ ಇಲ್ಲ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ, ವಿಚಾರಣೆ ಮಾಧ್ಯಮಗಳ ಸಮ್ಮುಖದಲ್ಲಿ ನಡೆಯಲ್ಲ ಅದು ಸಾಧುವೂ ಅಲ್ಲ. ಆದರೆ, ಅಧಿಕಾರಿಗಳು ಹೋದ ಮೇಲೆ ನಡೆದ ವಿಚಾರಣೆಯ ಬಗ್ಗೆ ನಿರಂಜನ್ ಅವರು ಮಾಧ್ಯಮಗಳಿಗೆ ತಿಳಿಸಬಹುದು. ನಾವು ವರದಿ ಮಾಡಿರುವ ಹಾಗೆ, ನಿನ್ನೆ ಹುಬ್ಬಳ್ಳಿಯ ಜೈಲಲ್ಲಿದ್ದ ಫಯಾಜ್ ನನ್ನು ನಿನ್ನೆ ತಮ್ಮ ವಶಕ್ಕೆ ಪಡೆದಿರುವ ಅಧಿಕಾರಿಗಳು, ಅವನ ವೈದ್ಯಕೀಯ ಪರೀಕ್ಷೆ ನಡೆಸಿ ಕೊಲೆ ನಡೆದ ಸ್ಥಳಕ್ಕೆ ಮಹಜರ್ ಗಾಗಿ ಕರೆತಂದಿದ್ದರು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದ ನಿರಂಜನ್ ಹಿರೇಮಠ ಮನೆಗೆ ಭೇಟಿ ನೀಡಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ವೆರಿ ಸಾರಿ’: ನೇಹಾ ಹಿರೇಮಠ ತಂದೆ ನಿರಂಜನ್ ಜತೆ ದೂರವಾಣಿಯಲ್ಲಿ ಇನ್ನೂ ಏನೇನಂದರು ಸಿಎಂ ಸಿದ್ದರಾಮಯ್ಯ? ಇಲ್ಲಿದೆ ವಿವರ

Follow us on