AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಓಯೇ ಸರ್ಫರಾಝ್... ವಿರಾಟ್ ಕೊಹ್ಲಿ ನಡೆಗೆ ಭಾರೀ ಮೆಚ್ಚುಗೆ

VIDEO: ಓಯೇ ಸರ್ಫರಾಝ್… ವಿರಾಟ್ ಕೊಹ್ಲಿ ನಡೆಗೆ ಭಾರೀ ಮೆಚ್ಚುಗೆ

ಝಾಹಿರ್ ಯೂಸುಫ್
|

Updated on:Apr 06, 2026 | 11:29 AM

Share

Virat Kohli's Gesture For Sarfaraz Khan: ಈ ಪಂದ್ಯದಲ್ಲಿ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಸರ್ಫರಾಝ್ ಖಾನ್ ಅವರನ್ನು ವಿರಾಟ್ ಕೊಹ್ಲಿ ಕೂಗಿ ಕರೆದಿದ್ದಾರೆ. ಸರ್ಫರಾಝ್ ತಿರುಗಿ ನೋಡಿದಾಗ, ಕೊಹ್ಲಿ ಚಪ್ಪಾಳೆ ತಟ್ಟುತ್ತಾ 'ಥಮ್ಸ್ ಅಪ್' (Thumbs-up) ತೋರಿಸಿ ಅವರ ಅಮೋಘ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಬದ್ಧ ವೈರಿಗಳ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ 207 ರನ್​ಗಳಿಸಿ 43 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲು-ಗೆಲುವುಗಳ ನಡುವೆ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದು ವಿರಾಟ್ ಕೊಹ್ಲಿ ಅವರ ಕ್ರೀಡಾ ಸ್ಫೂರ್ತಿ!

ಆರ್‌ಸಿಬಿ ನೀಡಿದ್ದ 251 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ತಂಡದ ಪರ ಸರ್ಫರಾಝ್ ಖಾನ್ ಏಕಾಂಗಿ ಹೋರಾಟ ನಡೆಸಿದ್ದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆರ್‌ಸಿಬಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದ ಸರ್ಫರಾಝ್  ಕೃನಾಲ್ ಪಾಂಡ್ಯ ಮುನ್ನುಗ್ಗಿ ಬಂದು ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆದರು.

ಹೀಗೆ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಸರ್ಫರಾಝ್ ಖಾನ್ ಅವರನ್ನು ವಿರಾಟ್ ಕೊಹ್ಲಿ ಕೂಗಿ ಕರೆದಿದ್ದಾರೆ. ಸರ್ಫರಾಝ್ ತಿರುಗಿ ನೋಡಿದಾಗ, ಕೊಹ್ಲಿ ಚಪ್ಪಾಳೆ ತಟ್ಟುತ್ತಾ ಅವರ ಅಮೋಘ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.

ಎದುರಾಳಿ ತಂಡದ ಆಟಗಾರನಾಗಿದ್ದರೂ, ಒಬ್ಬ ಯುವ ಪ್ರತಿಭೆಯ ಹೋರಾಟವನ್ನು ವಿರಾಟ್ ಕೊಹ್ಲಿ ಗೌರವಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೊಹ್ಲಿಯ ನಡೆಗೆ ಅಭಿಮಾನಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

 

Published on: Apr 06, 2026 11:20 AM
Follow Us