RCB vs CSK: ಸಾವಿರ ರೂಪಾಯಿ ಟಿಕೆಟ್ 15000 ಕೊಟ್ಟರೂ ಸಿಗುತ್ತಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಅಭಿಮಾನಿಗಳ ಅಳಲು

| Updated By: Ganapathi Sharma

Updated on: May 18, 2024 | 4:47 PM

ಧೋನಿ ಮತ್ತು ಕೊಹ್ಲಿ ನಡುವಣ ಕದನ ನೋಡಲು ಉತ್ಸಾಹದಿಂದ ಬಂದಿದ್ದೇವೆ. ಆದರೆ, ಟಿಕೆಟ್​​ ಸಿಗುತ್ತಾ ಇಲ್ಲ. ಹೆಚ್ಚು ದುಡ್ಡು ಕೊಟ್ಟಾದರೂ ಟಿಕೆಟ್ ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಟಿಕೆಟ್ಟೇ ಸಿಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಅಲವತ್ತುಕೊಂಡಿದ್ದಾರೆ.

ಬೆಂಗಳೂರು, ಮೇ 18: ಐಪಿಎಲ್​​ (IPL 2024) ಟೂರ್ನಿಯ ಮಹತ್ವದ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಕ್ಷಣಗಣನೆ ಆರಂಭವಾಗಿದೆ. ಆರ್​ಸಿಬಿ ಮತ್ತು ಸಿಎಸ್​​ಕೆ (RCB vs CSK) ಮಧ್ಯೆ ನಡೆಯುವ ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ಸ್ಟೇಡಿಯಂನತ್ತ ಬರಲಾರಂಭಿಸಿದ್ದಾರೆ. ಸ್ಟೇಡಿಯಂ ಹೊರಭಾಗದಲ್ಲಿ ಮಧ್ಯಾಹ್ನದಿಂದಲೇ ಜನಸಂದಣಿ ಶುರುವಾಗಿದೆ. ಈ ಮಧ್ಯೆ, ಬ್ಲ್ಯಾಕ್​​​ನಲ್ಲಿ ಟಿಕೆಟ್ ಮಾರಾಟವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. 1000 ರೂಪಾಯಿಯ ಟಿಕೆಟ್ 15000 ರೂ. ಕೊಟ್ಟರೂ ಸಿಗುತ್ತಿಲ್ಲ ಎಂದು ಅಭಿಮಾನಿಗಳು ‘ಟಿವಿ9’ ಬಳಿ ಅಳಲು ತೋಡಿಕೊಂಡಿದ್ದಾರೆ.

ಮತ್ತೊಂದು ಕಡೆ ವಿರಾಟ್ ಕೊಹ್ಲಿ ಹಾಗೂ ಎಂಎಸ್​​ ಧೋನಿ ಅಭಿಮಾನಿಗಳು ಮ್ಯಾಚ್ ನೋಡಲು ಕಾತುರರಾಗಿದ್ದು, ನೆಚ್ಚಿನ ಆಟಗಾರರ ಪರ ಘೋಷಣೆಗಳನ್ನು ಕೂಗುತ್ತಾ ಮೈದಾನದತ್ತ ದಾಂಗುಡಿ ಇಟ್ಟಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಎಲ್ಲಿ ನೋಡಿದರೂ ಆರ್​​ಸಿಬಿ ಹಾಗೂ ಸಿಎಸ್​​ಕೆ ಜೆರ್ಸಿಗಳೇ ಕಾಣಿಸುತ್ತಿವೆ.

ಐಪಿಎಲ್​ ಪ್ಲೇ ಆಫ್ ಹಂತ ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಹೀಗಾಗಿ ಇತ್ತಂಡಗಳ ಅಭಿಮಾನಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ಇದನ್ನೂ ಓದಿ: IPL 2024: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ- ಸಿಎಸ್​ಕೆ ಪ್ರದರ್ಶನ ಹೇಗಿದೆ? ಇಲ್ಲಿದೆ ಪೂರ್ಣ ಅಂಕಿಅಂಶ

ಧೋನಿ ಮತ್ತು ಕೊಹ್ಲಿ ನಡುವಣ ಕದನ ನೋಡಲು ಉತ್ಸಾಹದಿಂದ ಬಂದಿದ್ದೇವೆ. ಆದರೆ, ಟಿಕೆಟ್​​ ಸಿಗುತ್ತಾ ಇಲ್ಲ. ಹೆಚ್ಚು ದುಡ್ಡು ಕೊಟ್ಟಾದರೂ ಟಿಕೆಟ್ ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಟಿಕೆಟ್ಟೇ ಸಿಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ