IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಕ್ಲಾಸ್​​: ಸದಾನಂದಗೌಡ ಹೇಳಿದ್ದೇನು?

Edited By:

Updated on: Apr 04, 2026 | 5:29 PM

ಐಪಿಎಲ್ ಟಿಕೆಟ್‌ಗಾಗಿ ಶಾಸಕರು ಭಿಕ್ಷೆ ಬೇಡುತ್ತಿರುವುದಕ್ಕೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಶಾಸಕರಿಗೆ ನಾಚಿಕೆಗೇಡಿನ ಸಂಗತಿ. ಜನಪ್ರತಿನಿಧಿಗಳು ಕ್ಷೇತ್ರಕ್ಕೆ ನೆರವು ಕೇಳಬೇಕು, ಐಪಿಎಲ್ ಟಿಕೆಟ್‌ಗಾಗಿಲ್ಲ ಎಂದಿದ್ದಾರೆ. ಈ ನಡುವೆ ಸುಮಾರು 215 ಶಾಸಕರಿಗೆ ತಲಾ ಮೂರು ಟಿಕೆಟ್‌ಗಳನ್ನು ವಿತರಿಸಲಾಗಿದ್ದು, ಕೆಲವರು ಮಾತ್ರ ನೈತಿಕ ಕಾರಣಗಳಿಗಾಗಿ ಅವುಗಳನ್ನು ನಿರಾಕರಿಸಿದ್ದಾರೆ.

ಬೆಂಗಳೂರು, ಏಪ್ರಿಲ್​​ 04: IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರ ಬೇಡಿಕೆ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕಿಡಿ ಕಾರಿದ್ದಾರೆ. ಶಾಸಕರ ಪಿಎಗಳು IPL ಟಿಕೆಟ್ ಪಡೆದಿದ್ದನ್ನು ಖಂಡಿಸಿದ ಡಿವಿಎಸ್, ಪಂದ್ಯದ ಟಿಕೆಟ್​ಗಾಗಿ ಯಾವುದೇ ಶಾಸಕರು ಭಿಕ್ಷೆ ಬೇಡಬಾರದು. ಆರ್​ಸಿಬಿ ವಿಜಯೋತ್ಸವ ವೇಳೆ 11 ಅಭಿಮಾನಿಗಳ ಸಾವಿನ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಿದ್ದರೆ ಗೌರವವಿರುತ್ತಿತ್ತು. ಚುನಾವಣೆಯಲ್ಲಿ ನೂರಾರು ಕೋಟಿ ಸುರಿದು ಶಾಸಕರಾದವರು ಟಿಕೆಟ್​ಗೆ ಭಿಕ್ಷೆ ಬೇಡುತ್ತಾರಲ್ಲಾ ನಾಚಿಕೆಯಾಗಬೇಕು. ಯಾವುದೇ ಜನಪ್ರತಿನಿಧಿ ಹೀಗೆ ಮಾಡಬಾರದು. ಕ್ಷೇತ್ರಕ್ಕೆ ಏನಾದರೂ ಸಹಕಾರ ಬೇಕು ಅಂದಾಗ ಭಿಕ್ಷೆ ಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More