Assembly Session: ಸದನದಲ್ಲಿ ಸಚಿವರು ಗೈರು, ತಾಜ್ ವೆಸ್ಟೆಂಡ್ ಹೋಟೆಲ್ ಗೆ ಅಧಿವೇಶನ ಶಿಫ್ಟ್ ಮಾಡಿ ಎಂದ ಬಿಜೆಪಿ ಶಾಸಕ ಸುರೇಶ್ ಕುಮಾರ್!
ಸುರೇಶ್ ಕುಮಾರ್ ಮಾತಿನಿಂದ ಕೆರಳುವ ಕಾಂಗ್ರೆಸ್ ಶಾಸಕ ನಂಜೇಗೌಡ ನಿಮ್ಮ ಕಾಲದಲ್ಲೂ ಹೀಗೆ ಆಗಿತ್ತು ಅಂತ ಜೋರಾದ ಧ್ವನಿಯಲ್ಲಿ ಹೇಳುತ್ತಾರೆ. ಸಭಾಧ್ಯಕ್ಷರು ಅವರನ್ನು ಸುಮ್ಮನಾಗಿಸುತ್ತಾರೆ.
ಬೆಂಗಳೂರು: ದೆಹಲಿಯಿಂದ ಕಾಂಗ್ರೆಸ್ ಅಧಿನಾಯಕರು ವಿರೋಧ ಪಕ್ಷಗಳು ಬೆಂಗಳೂರಲ್ಲಿ ನಡೆಸುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಸಹಜವಾಗೇ ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯರೆಲ್ಲ ಅಧಿವೇಶನ ಬಂಕ್ ಮಾಡಿ ತಮ್ಮ ನಾಯಕರ ಜೊತೆಯಿದ್ದಾರೆ! ವಿರೋಧ ಪಕ್ಷ ಬಿಜೆಪಿಯ ಶಾಸಕರು 9 ಸಚಿವರ ಗೈರುಹಾಜರಿ ಬಗ್ಗೆ ತೀವ್ರ ಆಕ್ಷೇಪಣೆ ಎತ್ತಿದ್ದಾರೆ. ಸಾಮಾನ್ಯವಾಗಿ ಸದನದಲ್ಲಿ ಹೆಚ್ಚು ಮಾತಾಡದ ಹಿರಿಯ ಬಿಜೆಪಿ ನಾಯಕ ಸುರೇಶ್ ಕುಮಾರ್ (Suresh Kumar) ಎದ್ದು ನಿಂತು ಇವತ್ತು ಒಂದು ದಿನದ ಮಟ್ಟಿಗೆ ಅಧಿವೇಶನವನ್ನು ವಿರೋಧ ಪಕ್ಷಗಳ ನಾಯಕರು ಸಭೆ ನಡೆಸುತ್ತಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಶಿಫ್ಟ್ ಮಾಡಿದ್ದರೆ ಚೆನ್ನಾಗಿರುತಿತ್ತು ಅಂತ ಸಭಾಧ್ಯಕ್ಷರಿಗೆ ಹೇಳಿದಾಗ, ಯುಟಿ ಖಾದರ್ (UT Khader), ನೀವು ನೀಡಿದ ಸಲಹೆ ಚೆನ್ನಾಗಿದೆ, ಆದರೆ ಹಾಗೆ ಮಾಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಎಂದು ನಗುತ್ತಾ ಹೇಳುತ್ತಾರೆ. ಸುರೇಶ್ ಕುಮಾರ್ ಮಾತಿನಿಂದ ಕೆರಳುವ ಕಾಂಗ್ರೆಸ್ ಶಾಸಕ ನಂಜೇಗೌಡ (Nanje Gowda), ನಿಮ್ಮ ಕಾಲದಲ್ಲೂ ಹೀಗೆ ಆಗಿತ್ತು ಅಂತ ಜೋರಾದ ಧ್ವನಿಯಲ್ಲಿ ಹೇಳುತ್ತಾರೆ. ಸಭಾಧ್ಯಕ್ಷರು ಅವರನ್ನು ಸುಮ್ಮನಾಗಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ