ಹಲ್ಲೆ ಮಾಡಿದವ ವಿಂಗ್ ಕಮಾಂಡರ್ ಆಗಿದ್ದರೇನಂತೆ? ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ತಮ್ಮ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ, ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಯಲ್ಲಿದೆ, ಮಾತೃಭಾಷೆ ಕನ್ನಡ ಪ್ರಥಮ ಭಾಷೆಯಾದರೆ ಎರಡನೇ ಭಾಷೆ ಇಂಗ್ಲಿಷ್ ಎಂದು ಸಿದ್ದರಾಮಯ್ಯ ಹೇಳಿದರು. ತೃತೀಯ ಭಾಷೆಯಾಗಿ ಹಿಂದಿಯನ್ನು ಪರಿಗಣಿಸಬಹುದಲ್ಲ ಅಂದಾಗ ಸಿದ್ದರಾಮಯ್ಯ ಚುಟುಕಾಗಿ ತ್ರಿಭಾಷಾ ಸೂತ್ರಕ್ಕೆ ರಾಜ್ಯದಲ್ಲಿ ಅವಕಾಶವಿಲ್ಲವೆಂದು ಹೇಳಿದರು.
ಮಂಡ್ಯ, ಏಪ್ರಿಲ್ 22: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡದ ಹುಡುಗ ವಿಕಾಸ್ ಮೇಲೆ ಹಲ್ಲೆ ಮಾಡಿರುವ ಡಿಅರ್ಡಿಒ ಉದ್ಯೋಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ (Wing Commander Shiladitya Bose) ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು. ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಎರಡೂ ಕಡೆಯವರು ದೂರು ಸಲ್ಲಿಸಿದ್ದಾರೆ, ಹಲ್ಲೆ ಮಾಡಿದವ ವಿಂಗ್ ಕಮಾಂಡರ್ ಆಗಿರಲಿ, ಮತ್ತೇನಾದರೂ ಅಗಿರಲಿ, ಕಾನೂನಿನ್ವಯ ಕ್ರಮ ಜರುಗಿಸಲು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: ತಮ್ಮ ನಿವಾಸದಲ್ಲಿ ಕೆಲ ಮಾಜಿ ಶಾಸಕರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ