Loading video

ಕುಮಾರಸ್ವಾಮಿ ಎಷ್ಟೇ ಅಡ್ಡಿಪಡಿಸಿದರೂ ರಾಮನಗರದ ಹೆಸರು ಬದಲಾಯಿಸುವುದು ಮಾತ್ರ ನಿಶ್ಚಿತ: ಶಿವಕುಮಾರ್

|

Updated on: Mar 20, 2025 | 12:32 PM

ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ, ಚನ್ನಪಟ್ಟಣ ಮೊದಲಾದ ಊರುಗಳಲ್ಲಿ ವಾಸವಾಗಿರುವ ಜನ ಉದ್ಧಾರವಾಗೋದು ಕುಮಾರಸ್ವಾಮಿಯವರಿಗೆ ಬೇಕಿಲ್ಲವೇ? ಅವರು ತಮ್ಮ ಜಿಲ್ಲೆಯನ್ನು ಬಿಟ್ಟು ರಾಮನಗರಕ್ಕೆ ಬಂದಿದ್ದು ಯಾಕೆ? ತನ್ನ ಜಿಲ್ಲೆ, ತನ್ನ ಕ್ಷೇತ್ರದ ಅಭ್ಯುದಯಕ್ಕಾಗಿ ಶ್ರಮಿಸುವ ಹೊಣೆಗಾರಿಕೆ ತನ್ನ ಮೇಲಿದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಮಾರ್ಚ್ 20: ವಿಧಾನಸಭೆಯ ಇವತ್ತಿನ ಕಾರ್ಯಕಲಾಪಗಳಲ್ಲಿ ಭಾಗಿಯಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಎಷ್ಟೇ ಅಡ್ಡಿಪಡಿಸಿದರೂ ಏನೇ ಹೇಳಿದರೂ ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಲು ಕಟಿಬದ್ಧನಾಗಿರುವೆನೆಂದು ತಿಳಿಸಿದರು. ಹೆಸರು ಬದಲಾಯಿಸಲು ಅನುಮತಿ ಪಡೆಯಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ, ಸುತ್ತೋಲೆಯ ಮೂಲಕ ಮಾಹಿತಿ ಹಂಚಿಕೊಳ್ಳಬೇಕಿತ್ತು, ಅದನ್ನು ಮಾಡಿದ್ದೇವೆ ಅಷ್ಟೇ ಅಂತ ಶಿವಕುಮಾರ್ ಕಡ್ಡಿ ತುಂಡು ಮಾಡಿದಂತೆ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಾಜ್ಯಪಾಲರಿಂದ ಡಿಕೆ ಶಿವಕುಮಾರ್​​ಗೆ ಮತ್ತೊಂದು ಶಾಕ್ ಕೊಡಿಸಲು ಬಿಜೆಪಿ ಪ್ಲ್ಯಾನ್..!