ಗೃಹಲಕ್ಷ್ಮಿ ಯೋಜನೆ ಹಣ ಚುನಾವಣೆ ಸಮಯದಲ್ಲಿ ಮಾತ್ರ ನೀಡುವ ಹಣ ಅಂತ ಪುನರ್ ನಾಮಕರಣ ಮಾಡಿ: ಸರವಣ
ಹೇಳಿದ ಸಮಯಕ್ಕೆ ಸರಿಯಾಗಿ ಹಣ ತಲುಪದಿದ್ದರೆ ಫಲಾನುಭವಿಗಳಿಗೆ ಬಹಳ ತೊಂದರೆಯಾಗುತ್ತದೆ, ಗೃಹಲಕ್ಷ್ಮಿ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಅವರು ಹತ್ತಾರು ಕಮಿಟ್ಮೆಂಟ್ಗಳನ್ನು ಮಾಡಿಕೊಂಡಿರುತ್ತಾರೆ. ಅದು ಮಕ್ಕಳ ಶಾಲಾ ಫೀ ಆಗಿರಬಹುದು ಟ್ಯೂಷನ್ ಫೀ ಆಗಿರಬಹುದು ಅಥವಾ ಬೇರೆ ಏನಾದರೂ ಕಾರಣವಾಗಿರಬಹುದು, ಹಣ ಟೈಮಿಗೆ ಸರಿಯಾಗಿ ಸಿಗದಿದ್ದರೆ ಸಮಸ್ಯೆಯಾಗುತ್ತದೆ ಎಂದು ಸರವಣ ಹೇಳಿದರು.
ಬೆಂಗಳೂರು, ಮಾರ್ಚ್ 20: ವಿಧಾನ ಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿಎ ಸರವಣ (TA Saravana) ಗೃಹಲಕ್ಷ್ಮಿ ಯೋಜನೆ ಅಡಿ ಸಿದ್ದರಾಮಯ್ಯ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಟ್ರಾನ್ಸ್ಫರ್ ಮಾಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿದರು. ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು 6ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಅಥವಾ ಚುನಾವಣಾ ಸಮಯದಲ್ಲಿ ಮಾತ್ರ ನೀಡುವ ಹಣದ ಯೋಜನೆ ಅಂತ ಪುನರ್ ನಾಮಕರಣ ಮಾಡಬೇಕೆಂದು ಸರವಣ ಗೇಲಿ ಮಾಡಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ

ಟಿವಿ9 ಎಕ್ಸ್ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ

18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
