ಮುಖ್ಯಮಂತ್ರಿ ಯಾರಾದರೇನು? ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದಲ್ಲಿರುತ್ತದೆ: ತನ್ವೀರ್ ಸೇಟ್, ಶಾಸಕ

Updated on: Jul 12, 2025 | 1:38 PM

ಪಕ್ಷದಿಂದ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷ ಅಲ್ಲ ಎಂದು ಹೇಳುವ ನರಸಿಂಹರಾಜದ ಶಾಸಕನಿಗೆ ಸಿದ್ದರಾಮಯ್ಯನೇ ಮುಖ್ಯಮಂತ್ರಿಯಾಗಿ ಮುಂದವರಿಯಬೇಕು, ಅಥವಾ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಬೇಕು ಅಂತೇನೂ ಇಲ್ಲ, ಯಾರು ಮುಖ್ಯಮಂತ್ರಿವಯಾದರೇನು ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುತ್ತಲ್ಲ ಎನ್ನುವ ಅವರಿಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಅನ್ನೋದು ಗೊತ್ತಾಗುತ್ತದೆ.

ಮೈಸೂರು, ಜುಲೈ 12: ರಾಜಕಾರಣದಲ್ಲಿ ಮತ್ತು ಬದುಕಿನಲ್ಲಿ ನಾವು ನಿರೀಕ್ಷಿಸಿದಂತೆ ಯಾವುದೂ ನಡೆಯಲ್ಲ, ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ಅಧಿಕಾರ ಸೂತ್ರದ ಬಗ್ಗೆ ಯಾರಿಗೂ ಮಾಹಿತಿಯಿಲ್ಲ, ಹಾಗಾಗಿ ಬದಲಾವಣೆ ಕುರಿತು ಮಾತಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ (Tanveer Sait) ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಜನ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದಿದ್ದಾರೆ, 5-ವರ್ಷದ ಅವಧಿಗೆ ಸುಭದ್ರ ಸರಕಾರವಾಗಿ ಅಡಳಿತ ನೀಡುವುದು ಪಕ್ಷದ ಜವಾಬ್ದಾರಿಯಾಗಿದೆ, ಪಕ್ಷದ ಎಲ್ಲ ಶಾಸಕರು ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದು ಸೇಟ್ ಹೇಳಿದರು.

ಇದನ್ನೂ ಓದಿ:  ಸರ್ಕಾರದಲ್ಲಿರುವ ಗೊಂದಲ ಮತ್ತು ಪಕ್ಷಕ್ಕಾಗುತ್ತಿರುವ ಡ್ಯಾಮೇಜ್ ನಿವಾರಿಸಿ ಎಂದು ವರಿಷ್ಠರನ್ನು ಕೋರಿದ್ದೇವೆ: ತನ್ವೀರ್ ಸೇಟ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ