ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು

Updated By: Ganapathi Sharma

Updated on: Jun 07, 2025 | 5:40 PM

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬಾಲಕ ಪ್ರಜ್ವಲ್ ತಾಯಿ ಪವಿತ್ರ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡದೆ ಜನರ ಜೀವಗಳ ಜೊತೆ ಚೆಲ್ಲಾಟವಾಡಿದೆ. ಮಗನ ಸಾವಿನ ನೋವು ಇನ್ನು ಜೀವನ ಪರ್ಯಂತ ಅನುಭವಿಸಬೇಕಷ್ಟೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹುಚ್ಚು ಅಭಿಮಾನ ಬಿಡುವಂತೆ ಇತರ ಮಕ್ಕಳಲ್ಲಿ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ, ಜೂನ್ 7: ‘ಕೊಹ್ಲಿ ಅಭಿಮಾನಿ, ಜಸ್ಟ್ ನೋಡಿಕೊಂಡು ಬರುತ್ತೇನೆ’ ಎಂದು ಮಗ ಹೇಳಿದ. ಎಲ್ಲ ವ್ಯವಸ್ಥಿತವಾಗಿ ಇರಬಹುದು, ಎಲ್ಲರಂತೆ ಹೋಗಿ ನೋಡಿಕೊಂಡು ಬರಲಿ ಎಂದು ಭಾವಿಸಿ ಕಳುಹಿಸಿದೆವು. ಆದರೆ, ಆತ ಬರಲೇ ಇಲ್ಲ ಎಂದು ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬಾಲಕ ಪ್ರಜ್ವಲ್ ತಾಯಿ ಪವಿತ್ರ ಬೇಸರದಿಂದ ನುಡಿದರು. ಸರ್ಕಾರ ಯಾವುದನ್ನೂ ವ್ಯವಸ್ಥಿತವಾಗಿ ಮಾಡಿಲ್ಲ. ಕೊಹ್ಲಿ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ವಿರಾಟ್ ಕೊಹ್ಲಿ ಏನು ದೇವರಾ? ಹುಡುಗರು ಇಂಥ ಹುಚ್ಚನ್ನು ಬಿಡಬೇಕು. ಹಾಗಾದರೆ ಎಲ್ಲ ಸರಿಯಾಗಬಹುದು. ಮಗನ ಸಾವಿನ ನೋವನ್ನು ಇನ್ನು ಜೀವನದ ಕೊನೆವರೆಗೂ ನಾನು ಅನುಭವಿಸಬೇಕಷ್ಟೆ ಎಂದು ಅವರು ಹತಾಶೆ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ