ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿದ್ದಲ್ಲಿ ಅವರಿಗೆ ಊಟ ಮಾಡಿಸುವುದು ಒಂದು ದೊಡ್ಡ ಸಾಹಸವೇ ಸೈ. ಮಕ್ಕಳು ಊಟ ಮಾಡಲಿಕ್ಕೆ ತೀರಾ ರಗಳೆ ಮಾಡುವಂತದ್ದು ಅಥವಾ ಆಹಾರವನ್ನು ಬಾಯಲ್ಲಿ ತುಂಬಾ ಹೊತ್ತು ಇಟ್ಟುಕೊಂಡು, ಜಗಿಯದೆ ಬಾಯಲ್ಲಿಟ್ಟುಕೊಂಡು ಮತ್ತೆ, ಪೋಷಕರು ಫೋರ್ಸ್ ಮಾಡಿದ ನಂತರ ಜಗಿದು ನುಂಗುವಂತದ್ದು. ಅಥವಾ ಆಹಾರವನ್ನು ತಂದ ಕೂಡಲೇ ಓಡಿಹೋಗುವಂತದ್ದು. ಅವರ ಹಿಂದೆ ಪೋಷಕರು ನಡೆದಾಡಿಕೊಂಡು, ಊಟ ಮಾಡಿಸುವಂತದ್ದನ್ನು ಪಿಕ್ಕಿ ಈಟಿಂಗ್ ಎಂದು ಹೇಳಲಾಗುತ್ತದೆ. ಈ ರೀತಿ ಆಯ್ದ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಲು ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದನ್ನು ಹೆಚ್ಚಿಸಲು ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಲ್ಲಾಳ್ ಅವರು ಕೆಲವು ಸರಳ ಸಲಹೆಗಳನ್ನು ನೀಡಿದ್ದು, ಮಕ್ಕಳು ಬಿಸ್ಕತ್ತುಗಳು, ಚಾಕೊಲೇಟುಗಳು, ಮ್ಯಾಗಿ, ಪಾಸ್ತಾಗಳನ್ನು ಯಥೇಚ್ಛವಾಗಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಆಹಾರವನ್ನು ಮಕ್ಕಳಿಗೆ ಇಷ್ಟವಾಗುವಂತೆ ಸೇವನೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Mon, 10 August 26