ಭಾರತದಲ್ಲಿ ಸಾಫ್ಟ್​ವೇರ್​​ ಇಂಜಿನೀಯರ್ ಆಗುವುದಕ್ಕಿಂತ ಈ ದೇಶಗಳಲ್ಲಿ ಶಿಕ್ಷಕನಾಗುವುದು ಬಹಳ ಉತ್ತಮ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 08, 2021 | 8:39 PM

ನಮ್ಮ ದೇಶದಲ್ಲಿ ಸಾಫ್ಟ್ ವೇರ್ ಇಂಜಿನೀಯರ್​ಗೆ ಸಿಗುವ ಸಂಬಳಕ್ಕಿಂತ ದುಪ್ಪಟ್ಟು ಸಂಬಳವನ್ನು ಟೀಚರ್​ಗಳಿಗೆ ನೀಡುವ ದೇಶಗಳಿವೆ. ರಾಷ್ಟ್ರೀಯ ಶಿಕ್ಷಣ ಕೇಂದ್ರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ನೀವು ಹೌಹಾರುತ್ತೀರಿ.

ಒಂದು ಕಾಲವಿತ್ತು. ಮನೆಗಳಲ್ಲಿ ಹಿರಿಯರು ತಮ್ಮ ಮಕ್ಕಳು, ಮೊಮ್ಮಕ್ಕಳಲ್ಲಿ ಯಾವನಾದರೂ ದಡ್ಡನಾಗಿದ್ದರೆ, ‘ನೀನು ಮಾಸ್ತರ್ (ಶಿಕ್ಷಕ) ಆಗಾಕಷ್ಟೇ ಲಾಯಕ್ಕು’ ಅಂತ ಗದರುತ್ತಿದ್ದರು. ಅಂದರೆ ಅವರಿಗೆ ಶಿಕ್ಷಕನ ವೃತ್ತಿ ಅಷ್ಟು ನಿಕೃಷ್ಟವಾಗಿತ್ತು. ಮಕ್ಕಳನ್ನು ಮುಂದಿನ ಪ್ರಜೆಗಳಾಗಿ ರೂಪಿಸುವವರು ಅವರೇ ಅಂತ ಅವರಿಗೆ ಗೊತ್ತಿರಲಿಲ್ಲವೋ ಅಥವಾ ಗೊತ್ತಿದ್ದರೂ ಭಾರತದಲ್ಲಿ ಶಿಕ್ಷಕ ವೃತ್ತಿಯಲ್ಲಿರುವವರು ಪಡೆಯುವ ಬಹಳ ಕಡಿಮೆ ಸಂಬಳವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುತ್ತಿದ್ದರೋ? ಒಂದಂತೂ ನಿಜ. ಭಾರತದಲ್ಲಿ ಈಗಲೂ ಶಿಕ್ಷಕರಿಗೆ ಉತ್ತಮ ಸಂಬಳ ಸಿಗುತ್ತಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಸ್ವಲ್ಪ ಉತ್ತಮ ಎನ್ನುವ ಸಂಬಳ ಅವರಿಗೆ ಸಿಗುತ್ತಿದೆಯಾದರೂ ಬೇರೆ ದೇಶಗಳ ಶಿಕ್ಷಕರು ಪಡೆಯುತ್ತಿರುವ ಸಂಬಳವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಭಾರತೀಯರು ಪಡೆಯುತ್ತಿರುವುದು ನಗಣ್ಯ.

ನಮ್ಮ ದೇಶದಲ್ಲಿ ಸಾಫ್ಟ್ ವೇರ್ ಇಂಜಿನೀಯರ್​ಗೆ ಸಿಗುವ ಸಂಬಳಕ್ಕಿಂತ ದುಪ್ಪಟ್ಟು ಸಂಬಳವನ್ನು ಟೀಚರ್​ಗಳಿಗೆ ನೀಡುವ ದೇಶಗಳಿವೆ. ರಾಷ್ಟ್ರೀಯ ಶಿಕ್ಷಣ ಕೇಂದ್ರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ನೀವು ಹೌಹಾರುತ್ತೀರಿ. ಲಕ್ಸೆಂಬರ್ಗ್ ಹೆಸರಿನ ಒಂದು ಪುಟ್ಟ ರಾಷ್ಟ್ರದಲ್ಲಿ ಟೀಚರ್​ಗಳು ಪಡೆಯುವ ವಾರ್ಷಿಕ ಸಂಬಳವೆಷ್ಟು ಗೊತ್ತಾ? ಭಾರತೀಯ ಕರೆನ್ಸಿ ಪ್ರಕಾರ 58.92 ಲಕ್ಷ ರೂ. ಗಳು!

ಸ್ವಿಜರ್​​ಲ್ಯಾಂಡ್​​​ನಲ್ಲಿ ಒಬ್ಬ ಶಿಕ್ಷಕ ವರ್ಷಕ್ಕೆ ರೂ. 51.90 ಲಕ್ಷ ಸಂಪಾದಿಸುತ್ತಾನೆ. ಹಿಟ್ಲರ್ ಹುಟ್ಟಿದ ಜರ್ಮನಿಯಲ್ಲಿ ಟೀಚರೊಬ್ಬನ/ಳ ವಾರ್ಷಿಕ ಆದಾಯ ರೂ. 43.73 ಲಕ್ಷ. ನಾರ್ವೆಯಲ್ಲಿ ರೂ. 35.22 ಲಕ್ಷ, ಡೆನ್ಮಾರ್ಕ್​ನಲ್ಲಿ ರೂ. 34.84 ಲಕ್ಷ, ಅಮೇರಿಕಾನಲ್ಲಿ ರೂ. 32.43 ಲಕ್ಷ, ಮೆಕ್ಸಿಕೊನಲ್ಲಿ ರೂ. 31.88 ಲಕ್ಷ, ಸ್ಪೇನಲ್ಲಿ ರೂ. 31.18 ಲಕ್ಷ, ಆಸ್ಟ್ರೇಲಿಯನಲ್ಲಿ ರೂ. 30.35 ಲಕ್ಷ ಮತ್ತು ನೆದರ್ಲ್ಯಾಂಡ್ಸ್​​​ನಲ್ಲಿ ರೂ. 29.11 ಲಕ್ಷಗಳು!

ಈ ದೇಶಗಳಿಗೆ ಹೋಗಿ ನಾವೂ ಮಾಸ್ತರ್​ಗಳಾಗುವ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?

ಇದನ್ನೂ ಓದಿ: Viral Video: ಮರಿ ಆನೆಯನ್ನು ರಕ್ಷಿಸಿ ತಾಯಿಯ ಬಳಿ ಸೇರಿಸಿದ ತಮಿಳುನಾಡು ರಕ್ಷಣಾ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋವಿದು