ಹೆಚ್ಚುತ್ತಿರುವ ಎಮ್ ಈ ಎಸ್ ಪುಂಡಾಟ ಕೊನೆಗಾಣಿಸಲು ಕರ್ನಾಟಕ ಸರ್ಕಾರ ಬಿಗಿಕ್ರಮ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 18, 2021 | 8:35 PM

ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಶಿವ ಸೇನೆ, ಬೆಳಗಾವಿಯಲ್ಲಿರುವ ಎಮ್ ಈ ಎಸ್ ಘಟಕಕ್ಕೆ ಎಲ್ಲ ರೀತಿಯ ನೆರವು ಒದಗಿಸುತ್ತಿದೆ. ಅವರು ಪುಂಡಾಟ ನಡೆಸಿದಾಗ ಬಹಿರಂಗ ಹೇಳಿಕೆಗಳ ಮೂಲಕ ಬೆಂಬಲಿಸುತ್ತದೆ.

ಇದಕ್ಕೂ ಮುಂಚಿನ ವಿಡಿಯೋನಲ್ಲಿ ನಾವು ಬೆಳಗಾವಿಯ ಲಾಡ್ಜ್ ಒಂದರ ಮುಂದೆ ಪಾರ್ಕ್ ಮಾಡಲಾಗಿದ್ದ ಪೊಲೀಸ್ ವಾಹನದ ಮೇಲೆ ಶುಕ್ರವಾರ ಮಧ್ಯರಾತ್ರಿ ಎಮ್ ಈ ಎಸ್ ಪುಂಡರು ಕಲ್ಲು ತೂರಿ ಜಖಂಗೊಳಿಸಿದ್ದ ಸಿಸಿಟಿವಿ ಫುಟೇಜ್ ತೋರಿಸಿದ್ದೆವು. ಅಸಲಿಗೆ ವಾಹನ ಯಾವ ಮಟ್ಟಿಗೆ ಹಾನಿಗೊಳಗಾಗಿದೆ ಎಂದು ಆ ವಿಡಿಯೋನಲ್ಲಿ ಗೊತ್ತಾಗಿರಲಿಲ್ಲ. ಈ ವಿಡಿಯೋನಲ್ಲಿ ನಿಮಗೆ ಅದರಲ್ಲಿ ಸಂಪೂರ್ಣ ಚಿತ್ರಣ ಸಿಗುತ್ತದೆ. ಬೆಳಗಾವಿ ಪೊಲೀಸ್ ವ್ಯವಸ್ಥೆಯಿಂದ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಎಮ್ ಈ ಎಸ್ ಪುಂಡರು ಒಟ್ಟು 20 ವಾಹನಗಳನ್ನು ಜಖಂಗೊಳಿದ್ದು ಇದರಲ್ಲಿ 6 ಪೊಲೀಸ್ ಇಲಾಖೆಗೆ, 6 ಬೇರೆ ಇಲಾಖೆಗೆ ಮತ್ತು ಉಳಿದವು ಸಾರ್ವಜನಿಕರಿಗೆ ಸೇರಿವೆ.

ಈ ವಾಹನ ಸ್ಥಿತಿ ನೋಡಿ ಏನಾಗಿದೆ. ಇದು ಯಾದಗಿರಿ ಜಿಲ್ಲೆ ಪೊಲೀಸ್ ವ್ಯವಸ್ಥೆಗೆ ಸೇರಿದ ವಾಹನವಾಗಿದೆ. ಅದರ ಮೇಲೆ ಕರ್ನಾಟಕ ರಾಜ್ಯ ಪೊಲೀಸ್, ಯಾದಗಿರಿ ಜಿಲ್ಲೆ ಅಂತ ಬರೆದಿರುವುದು ಕಾಣಿಸುತ್ತದೆ. ಪ್ರಶ್ನೆ ಅದಲ್ಲ, ಈ ಎಮ್ ಈ ಎಸ್ ಗೂಂಡಾಗಳಿಗೆ ಇಷ್ಟು ಧೈರ್ಯ ಎಲ್ಲಿಂದ ಬರುತ್ತಿದೆ ಅನ್ನೋದು.

ಆಫ್ ಕೋರ್ಸ್, ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಶಿವ ಸೇನೆ, ಬೆಳಗಾವಿಯಲ್ಲಿರುವ ಎಮ್ ಈ ಎಸ್ ಘಟಕಕ್ಕೆ ಎಲ್ಲ ರೀತಿಯ ನೆರವು ಒದಗಿಸುತ್ತಿದೆ. ಅವರು ಪುಂಡಾಟ ನಡೆಸಿದಾಗ ಬಹಿರಂಗ ಹೇಳಿಕೆಗಳ ಮೂಲಕ ಬೆಂಬಲಿಸುತ್ತದೆ.

ಈ ಬಗೆಯ ಪುಂಡಾಟವನ್ನು ಅವರು ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೂ ಪುನರಾವರ್ತಿಸಲಿದ್ದಾರೆ. ಇದು ಪ್ರತಿಬಾರಿ ನಡೆಯುತ್ತಿರುವುದರಿಂದ ಗೃಹ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿತ್ತು. ಪೊಲೀಸರೊಂದಿಗೆ ಅರೆ ಮಿಲಿಟರಿ ಪಡೆಯನ್ನು ಅಧಿವೇಶನ ಮುಗಿಯುವವರೆಗೆ ನಿಯೋಜಿಸಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ.

ಸರ್ಕಾರ ಎಮ್ ಈ ಎಸ್ ಅನ್ನು ಹದ್ದುಬಸ್ತಿನಲ್ಲಿಡಲು ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಅರಗ ಜ್ಞಾನೇಂದ್ರ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ:   ಕಾಡುಕುರಿಯನ್ನು ಹೊಂಚು ಹಾಕಿ ಭೇಟೆಯಾಡಿದ ಚಿರತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ

Published on: Dec 18, 2021 08:35 PM