ವಿರೋಧ ಪಕ್ಷದವರು ಎಲ್ಲವನ್ನು ವಿರೋಧಿಸುವ ಬದಲು ಸಲಹೆಗಳನ್ನು ಸರ್ಕಾರಕ್ಕೆ ನೀಡಲಿ: ಪ್ರಿಯಾಂಕ್ ಖರ್ಗೆ
ವಿರೋಧ ಪಕ್ಷದವರು ಏನಾದರೂ ಹೇಳಲಿ, ಜನರಿಗೆ ಒಳ್ಳೆಯದಾಗುವ, ಪ್ರಯೋಜನಕಾರಿ ಎನಿಸುವ ಯೋಜನೆಗಳನ್ನು ತಮ್ಮ ಸರ್ಕಾರ ಜಾರಿಗೊಳಿಸಲಿದೆ ಎಂದು ಖರ್ಗೆ ಹೇಳಿದರು. ವಿರೋಧ ಪಕ್ಷದ ನಾಯಕರು ಕೇವಲ ತಮ್ಮ ಹೈಕಮಾಂಡನ್ನು ಮೆಚ್ಚಿಸಲು ಬೆಂಗಳೂರು ನಗರಕ್ಕೆ, ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಉದ್ಯಮಿ ಮೋಹನದಾಸ್ ಪೈ ಅವರ ವಿರುದ್ಧ ದಾಳಿ ನಡೆಸಿ ಟ್ವೀಟ್ ಗಳ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೊರಹಾಕುವವರಿಗೆ ಕೀ ಬೋರ್ಡ್ ವಾರಿಯರ್ಸ್ ಎಂದರು. ಕಳೆದ ಮೂರೂವರೆ ದಶಕಗಳಲ್ಲಿ ಬೆಂಗಳೂರು ವಿಶ್ವದಲ್ಲಿ ಸಿಲಿಕಾನ್ ವ್ಯಾಲಿಯಾಗಿ ಗುರುತಿಸಿಕೊಳ್ಳಲು ತಮ್ಮ ಸರ್ಕಾರದ ನೀತಿಗಳೂ ಕಾರಣವಾಗಿವೆ, ಒಂದು ವೇಳೆ ಐಟಿ-ಬಿಟಿ ಕ್ಷೇತ್ರ ಬೆಳೆಯುವ ಹಂತದಲ್ಲೇ ತಮ್ಮ ಸರ್ಕಾರ ತೆರಿಗೆ ಹೇರುವುದನ್ನು ಆರಂಭಿಸಿದ್ದರೆ ಕ್ಷೇತ್ರ ಈ ಪರಿ ಬೆಳೆಯುವುದು ಸಾಧ್ಯವಾಗುತಿತ್ತೇ? ಎಂದು ಖರ್ಗೆ ಪ್ರಶ್ನಿಸಿದರು. ವಿರೋಧ ಪಕ್ಷದವರು ಉಕ್ಕಿನ ಸೇತುವೆ ಬೇಡ ಅನ್ನುತ್ತಾರೆ, ಟನೆಲ್ ರೋಡ್ ಬೇಡ ಅನ್ನುತ್ತಾರೆ, ವಿಶ್ವಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಏನು ಬೇಕು ಏನು ಬೇಡ ಅನ್ನೋದಾದರೂ ಅವರು ಹೇಳಲಿ ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ: ಕಲಬುರಗಿಯ ರಸ್ತೆಯಲ್ಲಿ ಜನಸಾಗರ