ನರಸತ್ತವರ ರೀತಿ ವರ್ತಿಸಬೇಡಿ ಮಠಾಧಿಪತಿಗಳೇ: ಪ್ರಮೋದ್ ಮುತಾಲಿಕ್ ಕೆಂಡಾಮಂಡಲ
ಕಲಬುರಗಿಯ ರಾಘವಚೈತನ್ಯ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ ನೀಡಿದೆ. ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ ವಕ್ಫ್ ಟ್ರಿಬ್ಯುನಲ್ ಆಂದೋಲಾ ಸಿದ್ದಲಿಂಗ ಸ್ವಾಮೀಜಿಗೆ ಅನುಮತಿ ನಿರಾಕರಿಸಿರುವುದನ್ನು ಅವರು ಖಂಡಿಸಿದ್ದಾರೆ. ಹೈಕೋರ್ಟ್‌ನ ಈ ತೀರ್ಪು ಹಿಂದೂಗಳಿಗೆ ಸಂತಸ ತಂದಿದ್ದರೂ, ದೇವರ ಪೂಜೆಗೆ ನ್ಯಾಯಾಲಯದ ಅನುಮತಿ ಅಗತ್ಯ ಎಂಬುದು ದುರ್ದೈವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಲಬುರಗಿ, ಫೆಬ್ರವರಿ 26: ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿನ (Ladle Mashak Dargah Aland) ರಾಘವಚೈತನ್ಯ ಶಿವಲಿಂಗದ ಪೂಜೆ ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಮೌನವಾಗಿರುವ ಮಠಾಧೀಶರ ವಿರುದ್ದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನ್ಯಾಯಾಲಯದ ನಿರ್ದೇಶನದಂತೆ ಪೂಜೆ ಮುಗಿಸಿ ಮುಂದಿನ ಹೋರಾಟ ಮಾಡುತ್ತೇವೆ. ಬರುವ ಯುಗಾದಿಗೆ ಆಂದೋಲಾ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ ಪೂಜೆ ಮಾಡುತ್ತೇವೆ. ಸದ್ಯ ಈ ವಿಚಾರ ಜೀವಂತವಾಗಿ ಇಟ್ಟಿದ್ದೇವೆ. ಇದನ್ನೂ ನಾವು ಕೈ ಬಿಟ್ಟರೆ ಅದು ವಕ್ಫ್ ಬೋರ್ಡ್ದೇ ಆಗಿ ಬಿಡುತ್ತೆ. ಶ್ರೀರಾಮ ಸೇನೆ, RSS, ವಿಶ್ವ ಹಿಂದೂ ಪರಿಷತ್ ಸೇರಿ ಕೆಲವರು ಬಿಟ್ಟರೆ ಉಳಿದವರು ಯಾಕೆ ಬಾಯಿ ಮುಚ್ಚಿ ಕುಳಿತಿದ್ದಾರೋ? ಉಳಿದ ಸ್ವಾಮೀಜಿಗಳೇ ನೀವೇನು ನಿದ್ದೆ ಮಾಡುತ್ತಿದ್ದೀರಾ? ನಿಮ್ಮ ಮಠದ ಒಳಗಡೆ ಇರುವ ಲಿಂಗಕ್ಕೂ ನಾಳೆ ಮಲಮೂತ್ರ ಎರಚುತ್ತಾರೆ. ಸ್ವಾಮಿಜಿಗಳೇ, ನೀವು ಕಣ್ಣು ತೆರೆಯಿರಿ, ಆಂದೋಲಾ ಸ್ವಾಮೀಜಿಗಳನ್ನು ಬ್ಯಾನ್ ಮಾಡಿದ್ದಾರೆ. ಆದರೂ ಒಬ್ಬ ಸ್ವಾಮಿಯೂ ತುಟಿ ಪಿಟಕ್ ಎನ್ನುತ್ತಿಲ್ಲ. ನರಸತ್ತವರ ರೀತಿ ವರ್ತನೆ ಮಾಡಬೇಡಿ ಮಠಾಧಿಪತಿಗಳೇ. ಇಂತ್ತು ಆಳಂದನಲ್ಲಿ, ನಾಳೆ ನಿಮ್ಮಲ್ಲಿ ಇದೇ ಆಟ ನಡೆಯುತ್ತೆ. ನೀವು ಬಾಯಿ ಮುಚ್ಚಿಕೊಂಡು ಕೂತರೆ ನಿಮ್ಮ ಮಠ ಹೋಗುವುದು ಗ್ಯಾರಂಟಿ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.