MB Patil; ಖಾತೆಗಳನ್ನು ಹಂಚುವ ಕಾರ್ಯ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು: ಎಂಬಿ ಪಾಟೀಲ್
ಇಂಗ್ಲಿಷ್ ಮಾಧ್ಯಮಗಳ ಪ್ರತಿನಿಧಿಗಳು, ಸಂಪುಟ ಸಭೆಯಲ್ಲಿ ಯಾವ್ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಅಂತ ಕೇಳಿದಾಗ ಪಾಟೀಲ್ ಅದನ್ನೆಲ್ಲ ಮುಖ್ಯಮಂತ್ರಿಗಳು ಸುದ್ದಿಗೋಷ್ಟಿಯಲ್ಲಿ ಹೇಳುತ್ತಾರೆ ಎಂದರು.
ಬೆಂಗಳೂರು: ಹೊಸ ಸರ್ಕಾರದ ಮೊದಲ ಸಂಪುಟ ಸಭೆ ಮುಗಿದ ಬಳಿಕ ಹೊರಬಂದ ಸಚಿವ ಎಂ ಬಿ ಪಾಟೀಲ್ (MB Patil) ಅವರನ್ನು ಪತ್ರಕರ್ತರು ಸುತ್ತುವರಿದರು. ಹಿಂದಿನ ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ನೀರಾವರಿ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಗೃಹ ಸಚಿವರಾಗಿ (home minister) ಕೆಲಸ ಮಾಡಿದ್ದ ಅವರು ಈ ಬಾರಿ ಯಾವ ಖಾತೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದರು. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ಸಂಗತಿ, ಖಾತೆಗಳನ್ನು ನಿರ್ಧರಿಸುವ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇರೋದು, ಯಾರಿಗೆ ಯಾವ ಖಾತೆ ಅಂತ ಅವರೇ ನಿರ್ಧರಿಸುತ್ತಾರೆ ಎಂದು ಪಾಟೀಲ್ ಹೇಳಿದರು. ಇಂಗ್ಲಿಷ್ ಮಾಧ್ಯಮಗಳ ಪ್ರತಿನಿಧಿಗಳು, ಸಂಪುಟ ಸಭೆಯಲ್ಲಿ ಯಾವ್ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಅಂತ ಕೇಳಿದಾಗ ಅದನ್ನೆಲ್ಲ ಮುಖ್ಯಮಂತ್ರಿಗಳು ಸುದ್ದಿಗೋಷ್ಟಿಯಲ್ಲಿ ಹೇಳುತ್ತಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ