Loading video

ಕೋರ್ಟ್ ಅದೇಶ ಪಾಲಿಸಲೇಬೇಕು, 15 ದಿನಗಳ ಬಳಿಕ ಮುಂದಿನ ಕಾನೂನು ಕ್ರಮದ ಬಗ್ಗೆ ಯೋಚಿಸುವೆ: ವಿನಯ್ ಕುಲಕರ್ಣಿ

Updated on: Jun 07, 2025 | 4:30 PM

ಯೋಗೀಶ್ ಕೊಲೆ ಪ್ರಕರಣದಲ್ಲಿ ತನ್ನ ಪಾಲೇನೂ ಇಲ್ಲ, ಯಾರಿಗೂ ಕಾಲ್ ಮಾಡಿಲ್ಲ ಎಂದು ವಿನಯ್ ಕುಲಕರ್ಣಿ ಹೇಳುತ್ತಾರೆ. ಬಹಳಷ್ಟು ಜನಕ್ಕೆ ತಾನು ಹೊರಗಿರೋದು ಬೇಕಿರಲಿಲ್ಲ, ವಾಪಸ್ಸು ಜೈಲಿಗೆ ಹೋಗುವುದನ್ನು ನೋಡಲು ಸಾವಿರಾರು ಜನ ಕಾಯ್ತಾ ಇದ್ದರು ಎಂದು ಅವರು ಹೇಳುತ್ತಾರೆ. 2016 ಮೇ ತಿಂಗಳಲ್ಲಿ ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ನಡೆದಿತ್ತು.

ಬೆಂಗಳೂರು, ಜೂನ್ 7: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gouda murder case ) ಅರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನನ್ನು ಸುಪ್ರೀಮ್ ಕೋರ್ಟ್ ರದ್ದು ಮಾಡಿರುವ ಕಾರಣ ಅವರು ಪುನಃ ಜೈಲು ಸೇರಬೇಕಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸುಪ್ರೀಮ್ ಕೋರ್ಟ್ ಜಾಮಿನು ರದ್ದು ಪಡಿಸಿರುವುದರಿಂದ ವಾಪಸ್ಸು ಜೈಲಿಗೆ ಹೋಗಲೇಬೇಕಿದೆ, ನ್ಯಾಯಲಯದ ಆದೇಶವನ್ನ ಪಾಲಿಸಲೇಬೇಕು ಎಂದು ಹೇಳಿದರು. ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಸದ್ಯಕ್ಕೆ ಏನನ್ನೂ ನಿರ್ಧರಿಸಿಲ್ಲ, ಎರಡು ವಾರ ಕಳೆದ ಬಳಿಕ ಅದರ ಬಗ್ಗೆ ಯೋಚಿಸುವುದಾಗಿ ಕುಲಕರ್ಣಿ ಹೇಳಿದರು.

ಇದನ್ನೂ ಓದಿ:  ಚಿನ್ನ ವಂಚನೆ ಪ್ರಕರಣ: ಐಶ್ವರ್ಯ ಗೌಡ, ವಿನಯ್ ಕುಲಕರ್ಣಿ ಮನೆಗಳ ಮೇಲೆ ಇ.ಡಿ ದಾಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ